ನ್ಯೂಸ್

VIDEO | ಚಿಕ್ಕಣನ ಪ್ರೇಯಸಿ ಬಗ್ಗೆ ಸುಳಿವು ಕೊಟ್ಟ ನಟ ಕುಳ್ಳ ಅನಂತ್? ಇಲ್ಲಿದೆ ವಿಡಿಯೋ

ಬೆಂಗಳೂರು: ಕನ್ನಡ ಚಿತ್ರರಂಗದ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರವನ್ನು ಮಾಡಿರುವ ನಟ ಕುಳ್ಳ ಅನಂತ್​, ಇತ್ತೀಚೆಗೆ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾಗಳಾದ 'ಮಾಸ್ಟರ್​ಪೀಸ್', 'ಸತ್ಯ ಹರಿಶ್ಚಂದ್ರ', 'ನಡುವೆ ಅಂತರವಿರಲಿ' ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅನಂತ್,​ ಚಿತ್ರರಂಗದಲ್ಲಿ ತಮಗೆ ಒಲಿದು ಬರುತ್ತಿರುವ ಆಫರ್​ಗಳು, ಮುಂಬರುವ ಸಿನಿಮಾಗಳ ಬಗ್ಗೆ ಕೆಲವು ವಿಚಾರಗಳನ್ನು ತಿಳಿಸಿದ್ದು, ನಟ ಚಿಕ್ಕಣ್ಣ ಅವರ ಪ್ರೇಯಸಿ ಯಾರು ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.

"ಚಿಕ್ಕಣ ನನಗೆ ಅಣ್ಣ ಆ ರೀತಿ ಇದ್ದಾರೆ ಅವರು, ನಾನು ಅವರೊಟ್ಟಿಗೆ ನಡುವೆ ಅಂತರವಿರಲಿ ಸೇರಿದಂತೆ ರಿಲೀಸ್​ಗೆ ರೆಡಿಯಿರುವ ಉಪಾಧ್ಯಕ್ಷ ಚಿತ್ರದಲ್ಲೂ ಸಹ ನಟಿಸಿದ್ದೇನೆ. ನಾನು ಅವರು ಅಣ್ಣ-ತಮ್ಮ ಇದ್ದಂತೆ, ಚಿಕ್ಕಣ್ಣ ಅವರ ಗರ್ಲ್​​ಫ್ರೆಂಡ್​ ಬಗ್ಗೆ".......ಕೆಳಗಿನ ಸಂದರ್ಶನದ ವಿಡಿಯೋ ಕ್ಲಿಕ್ ಮಾಡಿ, ಹೆಚ್ಚಿನ ಮಾಹಿತಿ ತಿಳಿಯಿರಿ.