ನ್ಯೂಸ್

ಬೈಲ ಬಸವೇಶ್ವರ ದೇವಸ್ಥಾನದ ಪೂಜೆ, ಅಭಿಷೇಕ ಆರಂಭ

ಹಾವೇರಿ: ತಾಲೂಕಿನ ಸುಕ್ಷೇತ್ರ ಕುಳೇನೂರ ಗ್ರಾಮದ ಸಂಕಲ್ಪ ಸಿದ್ಧಿ ಶ್ರೀ ಬೈಲಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮÁಸದ ಅಂಗವಾಗಿ ವಿಶೇಷ ಪೂಜೆ ಹಾಗೂ ಅಭಿಷೇಕ ಕಾರ್ಯಕ್ರಮ ಆರಂಭಗೊAಡಿವೆ.

ನಿತ್ಯವೂ ವಿಶೇಷ ಅಭಿಷೇಕ ಸೇವೆ ಜರಗುತ್ತಿವೆ. ದೇವರ ಪೂಜೆ ಅಭಿಷೇಕ ಮಾಡಿಸಲು ಕಾಯಂ ಸದಸ್ಯತ್ವ ಪಡೆದ ಹಾಗೂ ಶ್ರಾವಣ ಮಾಸದಲ್ಲಿ ಪೂಜೆ ಮಾಡಿಸುವ ಭಕ್ತರು ತಮಗೆ ಅನುಕೂಲವಾದ ದಿನದಂದು ಬಂದು ಅಭಿಷೇಕ ಮಾಡಿಸಿಕೊಂಡು ಪ್ರಸಾದ ತೆಗೆದುಕೊಂಡು ಹೋಗಬೇಕು ಎಂದು ಶ್ರೀ ಬೈಲ ಬಸವೇಶ್ವರ ಅಭಿಷೇಕ ಸಮಿತಿ ಪ್ರಕಟಣೆ ಮೂಲಕ ಮನವಿ ಮÁಡಿದ್ದಾರೆ.