ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ.33 ಮೀಸಲು ಘೋಷಿಸಿರುವ ಹಿನ್ನೆಲೆಯಲ್ಲಿ ಕುಕನೂರಿನ ವೀರಭದ್ರಪ್ಪ ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸಿಹಿ ಹಂಚಿ ಶನಿವಾರ ಸಂಭ್ರಮಿಸಿತು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶಿವಲೀಲಾ ದಳವಾಯಿ, ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಮಹೇಶ್ವರಿ ಸಾವಳಗಿ, ಪ್ರಮುಖರಾದ ಶಕುಂತಲಾ ಮಾಲಿಪಾಟೀಲ್, ಕವಿತಾ ಉಳ್ಳಾಗಡ್ಡಿ ಇದ್ದರು. 
ನ್ಯೂಸ್

ಸ್ತ್ರೀಯರ ಅಭಿವೃದ್ಧಿಗೆ ಶೇ.33 ಮೀಸಲು ಅನುಕೂಲ

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶಿವಲೀಲಾ ದಳವಾಯಿ ಅನಿಸಿಕೆ

ಕುಕನೂರು: ಮಹಿಳೆಯರ ರಾಜಕೀಯ ಪ್ರವೇಶಕ್ಕಾಗಿ ಕೇಂದ್ರ ಸರ್ಕಾರ ಲೋಕಸಭೆ, ರಾಜ್ಯಸಭೆ, ವಿಧಾನಸಭೆಯಲ್ಲಿ ಶೇ.33 ಮೀಸಲು ಘೋಷಿಸಿರುವುದು ಅಭಿನಂದನಾರ್ಹ ಕಾರ್ಯ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶಿವಲೀಲಾ ದಳವಾಯಿ ಹೇಳಿದರು.

ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ.33 ಮೀಸಲಾತಿ ಘೋಷಿಸಿರುವ ಹಿನ್ನೆಲೆಯಲ್ಲಿ ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಹಮ್ಮಿಕೊಂಡಿದ್ದ ಸಿಹಿ ಹಂಚಿಕೆ ಹಾಗೂ ಸಂಭ್ರಮೋತ್ಸವದಲ್ಲಿ ಶನಿವಾರ ಮಾತನಾಡಿದರು.

ಲೋಕಸಭೆ, ರಾಜ್ಯಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33 ಸ್ಥಾನ ಮೀಸಲಿಡುತ್ತಿರುವುದು ನಿಜಕ್ಕೂ ಮಹಿಳಾ ಸಬಲೀಕರಣಕ್ಕೆ ನೀಡಿದ ಆದ್ಯತೆಯಾಗಿದೆ. ಬಿಜೆಪಿ ಸರ್ಕಾರದ ಈ ಕಾರ್ಯ ಶ್ಲಾಘನಾರ್ಹ. ಪ್ರಧಾನಿ ನರೇಂದ್ರ ಮೋದಿ ಮಹಿಳೆಯರಿಗಾಗಿ ಹಲವು ಯೋಜನೆ ಜಾರಿಗೆ ತಂದಿದ್ದಾರೆ. ಬಿಜೆಪಿ ಮುಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಮಹಿಳಾ ಮೋರ್ಚಾದ ತಾಲೂಕು ಅಧ್ಯಕ್ಷೆ ಮಹೇಶ್ವರಿ ಸಾವಳಗಿ, ಪ್ರಮುಖರಾದ ಶಕುಂತಲಾ ಮಾಲಿಪಾಟೀಲ್, ಕವಿತಾ ಉಳ್ಳಾಗಡ್ಡಿ, ನಾಗರತ್ನ ಕರಮುಡಿ, ಗೌರಮ್ಮ ಗಿರೆಡ್ಡಿ, ವಿಜಯಲಕ್ಷ್ಮೀ ರಾಶಿ, ನೇತ್ರಾವತಿ, ಪದ್ಮಾ, ಕಾವ್ಯಾ, ಯಲ್ಲಮ್ಮ, ಪಪಂ ಸದಸ್ಯರಾದ ಲಕ್ಷ್ಮೀ ಸಬರದ, ಬಾಲರಾಜ ಗಾಳಿ ಇತರರಿದ್ದರು.