ನ್ಯೂಸ್

ನೆಚ್ಚಿನ ಪ್ರಧಾನಿಗೆ ಬೆಲ್ಲದ ಮೋದಿ ಮೂರ್ತಿಯ ಉಡುಗೊರೆ!

ಬೆಳಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿಗೆ ವಿಶೇಷ ಊಡುಗರೆ ನೀಡಲು ಬೆಳಗಾವಿ ಜಿಲ್ಲೆಯ ಕುಡಚಿ ಮತಕ್ಷೇತ್ರದ ಕೋಳಿಗುಡ್ಡ ಯಬರಟ್ಟಿ ಗ್ರಾಮ ಸಿದ್ಧವಾಗಿದೆ.

ನವ ಕರ್ನಾಟಕ ಸಂಕಲ್ಪ ಸಮಾವೇಶದಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಸಾವಯವ ಬೆಲ್ಲದಲ್ಲಿ ಅರಳಿದ ಮೋದಿ ಮೂರ್ತಿಯನ್ನು ಉಡುಗೊರೆಯಾಗಿ ನೀಡಲು ತಯಾರಿ ನಡೆಸಲಾಗಿದೆ.

ಈ ಸಾವಯವ ಬೆಲ್ಲವನ್ನೂ ರೈತರೇ ತಯಾರಿಸಿದ್ದು ಡಾ.ಬಾಬಾರಾವ್ ನಡೋಣಿ ಬೆಲ್ಲದ ಮೂರ್ತಿ ನಿರ್ಮಿಸಿದ್ದಾರೆ. ಈ ಮೂರ್ತಿಗೆ 20 ಕೆಜಿ ಬೆಲ್ಲವನ್ನು ಬಳಸಲಾಗಿದೆ.