ಹಾವೇರಿ: ಸರ್ಕಾರಿ ಸಾರಿಗೆ ಬಸ್ಗಳಲ್ಲಿ 30 ಕೆಜಿ ತೂಕದವರೆಗಿನ ಲಗೇಜುಗಳನ್ನು ಉಚಿತವಾಗಿ ಸಾಗಿಸುವ ಅವಕಾಶವಿದೆ. ಆದರೆ, ಇಲ್ಲೊಬ್ಬ ಕಂಡಕ್ಟರ್, ಸೈಕಲ್ ಟೈರ್ಗೂ ಟಿಕೆಟ್ ನೀಡಿರುವುದು ಬೆಳಕಿಗೆ ಬಂದಿದೆ.
ರಾಣಿಬೆನ್ನೂರಿನಿಂದ ಶಿಕಾರಿಪುರಕ್ಕೆ ಹೊರಟಿದ್ದ ಕೆಎ 42 ಎಫ್ 1237 ನಂಬರಿನ ಕೆಎಸ್ಆರ್ಟಿಸಿ ಬಸ್ನಲ್ಲಿ ಉಮೇಶ್ ಪಾಟೀಲ್ ಎಂಬುವರು ತಮ್ಮ ಮಗನ ಜತೆ ತಮ್ಮ ರಟ್ಟಿಹಳ್ಳಿಯ ತೊಟಗಂಟಿ ಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಮಗನ ಸೈಕಲ್ಗೆಂದು ತಂದ ಟೈರ್ಗೂ ಕಂಡಕ್ಟರ್ ಟಿಕೆಟ್ ನೀಡಿದ್ದಾರೆ.
ಟಿಕೆಟ್ ದರ ಒಬ್ಬರಿಗೆ 35 ರೂಪಾಯಿ. ತಂದೆ ಮತ್ತು ಮಗ ಇಬ್ಬರಿಗೆ 70 ರೂಪಾಯಿ ಆಗುತ್ತದೆ. ಆದರೆ, ಟೈರ್ಗೂ 5 ರೂ. ಸೇರಿಸಿ ಒಟ್ಟು 75 ರೂ. ಟಿಕೆಟ್ ನೀಡಲಾಗಿದೆ. ಟಿಕೆಟ್ನಲ್ಲಿ ಲಗೇಜ್ ಯೂನಿಟ್ 1 ಎಂದು ಉಲ್ಲೇಖಿಸಿ 5 ರೂ. ಚಾರ್ಜ್ ಮಾಡಿದ್ದಾರೆ.
ಟೈರ್ಗೂ ಏಕೆ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಪ್ರಯಾಣಿಕ ಉಮೇಶ್ ಪಾಟೀಲ್ ಪ್ರಶ್ನೆ ಮಾಡಿದರೆ ನಮಗೆ ಮೇಲಿಂದ ಅದೇಶ ಬಂದಿದೆ ಎಂದು ಕಂಡಕ್ಟರ್ ಸಮರ್ಥನೆ ನೀಡಿದ್ದಾರೆ.
ಇನ್ನು ಕೆಎಸ್ಆರ್ಟಿಸಿಯ ನಿಮಯದ ಪ್ರಕಾರ ಪ್ರತಿ ಪ್ರಯಾಣಿಕರು 30 ಕೆ.ಜಿ ತೂಕದವರೆಗೆ ಲಗೇಜ್ ಉಚಿತವಾಗಿ ತೆಗೆದುಕೊಂಡು ಹೋಗಲು ಅವಕಾಶ ಇರುತ್ತದೆ. ಅದಕ್ಕಿಂತ ಹೆಚ್ಚು ತೂಕದ ಲಗೇಜ್ ತೆಗೆದುಕೊಂಡು ಹೋಗಿದಲ್ಲಿ ನಿಗದಿತ ತೂಕವನ್ನು ಬಿಟ್ಟು ಉಳಿದ ಹೆಚ್ಚುವರಿ ತೂಕಕ್ಕೆ ದರ ವಿಧಿಸಲಾಗುತ್ತದೆ. (ದಿಗ್ವಿಜಯ ನ್ಯೂಸ್)