ನ್ಯೂಸ್

ಪದವಿ/ ಸ್ನಾತಕೋತ್ತರ ಪದವಿ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ಕರಾಮುವಿವಿ ಸೂಚನೆ

sspmiracle1982

ಬೆಂಗಳೂರು : ಕರ್ನಾಟಕ ರಾಜ್ಯ ಮುಖ್ಯ ವಿಶ್ವವಿದ್ಯಾಲಯ ನಿಗದಿತ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸುವಂತೆ ಅಧಿಸೂಚನೆ ಹೊರಡಿಸಿದೆ.

2014-15 ರ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶ ಪಡೆದು ಪ್ರಸ್ತುತ ಅಂತಿಮ ವರ್ಷದ ಬಿಎ/ ಬಿಕಾಂ ವಿದ್ಯಾರ್ಥಿಗಳು ಹಾಗೂ 2019-20 ನೇ ಶೈಕ್ಷಣಿಕ ವರ್ಷದಲ್ಲಿ ಅಂತಿಮ ವರ್ಷದ ಎಂ.ಎ/ ಎಂ.ಕಾಂ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸುವಂತೆ ತಿಳಿಸಲಾಗಿದೆ.

ದಂಡ ಶುಲ್ಕವಿಲ್ಲದೆ ಆಗಸ್ಟ್ 10 ರೊಳಗಾಗಿ ಹಾಗೂ 200 ರೂ. ದಂಡಶುಲ್ಕದೊಂದಿಗೆ ಆಗಸ್ಟ್ 24 ರವರೆಗೆ ಆನ್​ಲೈನ್ ನಲ್ಲಿ ಪರೀಕ್ಷಾ ಶುಲ್ಕಪಾವತಿಸಬಹುದಾಗಿದೆ.

ವೆಬ್​​ಸೈಟ್​​ನಲ್ಲಿ ಲಭ್ಯವಿರುವ ಪರೀಕ್ಷಾ ಅರ್ಜಿಯನ್ನು ಭರ್ತಿ ಮಾಡಿ ಆನ್​ಲೈನ್ ಮೂಲಕವೇ ಶುಲ್ಕ ಪಾವತಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗೆ 9448668880 ಅಥವಾ www.ksoumysuru.ac.in ಸಂಪರ್ಕಿಸಬಹುದು ಎಂದು ಪ್ರಾದೇಶಿಕ ನಿದೇರ್ಶಕ ಗಿರೀಶ್ ಎಚ್. ಎನ್. ತಿಳಿಸಿದ್ದಾರೆ.