ನ್ಯೂಸ್

ಕಸ್ಟಡಿಯಲ್ಲಿ ಕೃತಿ ಶೆಟ್ಟಿ; ನಾಗಚೈತನ್ಯಗೆ ನಾಯಕಿಯಾದ ಕನ್ನಡ ಮೂಲದ ನಟಿ

‘ಉಪ್ಪೆನಾ’ಮೂಲಕ 2021ರಲ್ಲಿ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿ ಪದಾರ್ಪಣೆ ಮಾಡಿದ ಕನ್ನಡ ಮೂಲದ ನಟಿ ಕೃತಿ ಶೆಟ್ಟಿ, ಟಾಲಿವುಡ್​ನಲ್ಲಿ ಈಗ ತುಂಬ ಬಿಜಿಯಾಗಿದ್ದಾರೆ. ‘ಬಂಗಾರಾ›ಜು’, ‘ವಾರಿಯರ್’ ಸೇರಿದಂತೆ ನಾಲ್ಕೈದು ಚಿತ್ರಗಳಲ್ಲಿ ನಟಿಸಿರುವ ಅವರು ಸದ್ಯ ನಾಗಚೈತನ್ಯ ನಾಯಕನಾಗಿರುವ ‘ಕಸ್ಟಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಅವರ ಫಸ್ಟ್​ಲುಕ್ ಬಿಡುಗಡೆಯಾಗಿದೆ.

ವೆಂಕಟ್ ಪ್ರಭು ಆಕ್ಷನ್-ಕಟ್ ಹೇಳುತ್ತಿರುವ, ದ್ವಿಭಾಷಾ ಸಿನಿಮಾ ‘ಕಸ್ಟಡಿ’. ಚಿತ್ರದಲ್ಲಿ ಕೃತಿ, ರೇವತಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಆಕೆಯ ಪಾತ್ರ ಏನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ. ಸದ್ಯ ‘ಕಸ್ಟಡಿ’ ಚಿತ್ರೀಕರಣದ ಕೊನೆಯ ಹಂತದಲ್ಲಿದೆ. ಚಿತ್ರದಲ್ಲಿ ಅರವಿಂದ್ ಸ್ವಾಮಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರಿಯಾಮಣಿ, ಶರತ್ ಕುಮಾರ್, ಸಂಪತ್ ರಾಜ್, ವೆನ್ನೆಲಾ ಕಿಶೋರ್, ಪ್ರೇಮಿ ವಿಶ್ವನಾಥ್, ಪ್ರೇಮ್ ಪ್ರಮುಖ ತಾರಾಗಣದಲ್ಲಿದ್ದಾರೆ.

ಇಳಯರಾಜಾ ಹಾಗೂ ಅವರ ಮಗ ಯುವನ್ ಶಂಕರ್ ರಾಜಾ ಸಂಗೀತ ನಿರ್ದೇಶನದಲ್ಲಿ ‘ಕಸ್ಟಡಿ’ ಮೂಡಿಬರಲಿದ್ದು, ಮೇ 12ಕ್ಕೆ ತಮಿಳು ಹಾಗೂ ತೆಲುಗಿನಲ್ಲಿ ಚಿತ್ರ ತೆರೆ ಕಾಣಲಿದೆ. -ಏಜೆನ್ಸೀಸ್