ಕೃತಿ ಸನನ್​ 
ನ್ಯೂಸ್

ಟಾಲಿವುಡ್‌ನತ್ತ ಕೃತಿ : ವಿಜಯ್ ದೇವರಕೊಂಡ ಚಿತ್ರದ ಮೂಲಕ ಮತ್ತೆ ತೆಲುಗಿಗೆ ಮರಳಿದ ನಟಿ

ಪ್ರಮುಖ ಮುಖ್ಯಾಂಶಗಳು

  • ಆದಿ ಪುರುಷ್ ತೆರೆಕಂಡು ಮೂರು ವರ್ಷಗಳ ಬಳಿಕ ತೆಲುಗಿಗೆ ಮರಳಿದ ನಟಿ
  • ವಿಜಯ್ ದೇವರಕೊಂಡಗೆ ನಾಯಕಿಯಾಗಲಿರುವ ರಾಷ್ಟ್ರಪ್ರಶಸ್ತಿ ವಿಜೇತ ತಾರೆ
  • ಚಿತ್ರಕ್ಕೆ ಕೈಗೂಡಿಸಿದ ಹಾಲಿವುಡ್​ ತಂತ್ರಜ್ಱರು
ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಸನನ್ (krithi sanon) ಸದ್ಯ ಬಾಲಿವುಡ್‌ನಲ್ಲಿ ಬಿಜಿಯಾಗಿದ್ದಾರೆ. ಇಂತಹ ಕೃತಿ, ಮಹೇಶ್‌ಬಾಬು ನಟನೆಯ ತೆಲುಗಿನ ‘ನಂ 1 ನೆನೊಕ್ಕಡೆನೆ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ್ದರು. ಈ ಚಿತ್ರದ ಬಳಿಕ ಅವರು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿ, ‘ದಿಲ್‌ವಾಲೇ’, ‘ಲುಕ್ಕ ಚುಪ್ಪಿ’, ‘ಪಾಣಿಪತ್’, ‘ಹಮ್ ದೋ ಹಮಾರೆ ದೋ’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿ, ಮೆಚ್ಚುಗೆ ಪಡೆದರು. ಇದಾದ ಒಂಬತ್ತು ವರ್ಷಗಳ ಬಳಿಕ ‘ಆದಿಪುರುಷ್’ ಮೂಲಕ ಮತ್ತೆ ಟಾಲಿವುಡ್‌ಗೆ ಕೃತಿ ಆಗಮಿಸಿದ್ದರು. ಪ್ರಭಾಸ್ ನಟನೆಯ ಈ ಚಿತ್ರವು ತೆಲುಗು ಹಾಗೂ ಹಿಂದಿಯಲ್ಲಿ ಏಕಕಾಲದಲ್ಲಿ ಮೂಡಿಬಂದರೂ, ಬಾಕ್ಸಾಫೀಸ್‌ನಲ್ಲೂ ಮಕಾಡೆ ಮಲಗಿತ್ತು. ಅದೃಷ್ಟ ಪರೀಕ್ಷೆಗೆ ಬಂದಿದ್ದ ಕೃತಿಗೆ ನಿರಾಸೆಯಾಗಿತ್ತು. ‘ಆದಿಪುರುಷ್’ ಬಳಿಕ ಯಾವುದೇ ತೆಲುಗು ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಇದೀಗ ಮೂರು ವರ್ಷಗಳ ಬಳಿಕ ಕೃತಿ ಸನನ್ ಮತ್ತೆ ಟಾಲಿವುಡ್‌ನತ್ತ ಮುಖ ಮಾಡುತ್ತಿದ್ದಾರೆ. ನಟ ವಿಜಯ್ ದೇವರಕೊಂಡ ಹಾಗೂ ‘ಹಾಯ್ ನಾನ್ನ’ ಖ್ಯಾತಿಯ ಶೌರ್ಯುಮ್ ಕಾಂಬಿನೇಷನ್‌ನಲ್ಲಿ ಇತ್ತೀಚೆಗೆ ಹೊಸ ಸಿನಿಮಾ ಘೋಷಣೆಯಾಗಿತ್ತು. ಈ ಚಿತ್ರಕ್ಕೆ ಹಾಲಿವುಡ್ ತಂತ್ರಜ್ಞರು ಕೂಡ ಕೆಲಸ ಮಾಡುತ್ತಿದ್ದು, ಬಿಗ್‌ಬಜೆಟ್‌ನಲ್ಲಿ ಮೂಡಿಬರಲಿದೆ. ಇದೀಗ ಈ ಚಿತ್ರಕ್ಕೆ ನಾಯಕಿಯಾಗಿ ಕೃತಿ ಸನನ್ ಆಯ್ಕೆಯಾಗಿದ್ದಾರೆ. ನಟಿಗೆ ಚಿತ್ರದ ಸ್ಕ್ರಿಪ್ಟ್ ನೀಡಲಾಗಿದ್ದು, ಓದಿ ಆಕರ್ಷಿತರಾಗಿ, ಪಾತ್ರ ನಿರ್ವಹಿಸಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯದಲ್ಲೇ ಈ ಬಗ್ಗೆ ಚಿತ್ರತಂಡ ಘೋಷಿಸಲಿದೆಯಂತೆ. ಇನ್ನು ಕೃತಿ ಸನನ್ ಹಿಂದಿಯ ‘ಕಾಕ್‌ಟೇಲ್ 2’ ರಿಲೀಸ್ ಎದುರು ನೋಡುತ್ತಿದ್ದಾರೆ. -ಏಜೆನ್ಸೀಸ್