ನ್ಯೂಸ್

ಕೃಷ್ಣಾಪುರ ಮಠದಲ್ಲಿ ಅಕ್ಕಿ ಮುಹೂರ್ತ

ಗೋಪಾಲಕೃಷ್ಣ ಪಾದೂರ್

ಉಡುಪಿ:  ಕೃಷ್ಣಾಪುರ ಮಠದ ಪರ್ಯಾಯ ಪೂರ್ವಭಾವಿ ಸಾಂಪ್ರದಾಯಿಕ ಅಕ್ಕಿ ಮುಹೂರ್ತ ಬುಧವಾರ ವಿವಿಧ ಧಾರ್ಮಿಕ ವಿಧಿಧಾನಗಳೊಂದಿಗೆ ನೆರವೇರಿತು.

ಮಠದ ಪಟ್ಟದ ದೇವರು ಕಾಳೀಯ ಮರ್ಧನ ಕೃಷ್ಣನ ಸನ್ನಿಧಿಯಲ್ಲಿ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ನಂತರ ಮಠದ ವಿದ್ವಾಂಸರು ಚಂದ್ರಮೌಳೀಶ್ವರ, ಅನಂತೇಶ್ವರ, ಶ್ರೀಕೃಷ್ಣ ಮುಖ್ಯಪ್ರಾಣ, ಮಧ್ವ ಗುಡಿ, ಭೋಜನ ಶಾಲೆ, ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ, ಪ್ರಾರ್ಥನೆ ನೆರವೇರಿಸಿದರು.

ಬಳಿಕ ಅಕ್ಕಿಮುಡಿಗಳಿಗೆ ಆರತಿ ಎತ್ತಿ ಚಿಕ್ಕ ಅಕ್ಕಿ ಮುಡಿಯನ್ನು ಸ್ವರ್ಣ ಪಾಲಕ್ಕಿಯಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಸಿ ಮಠದ ಪಟ್ಟದ ದೇವರೆದುರು ಇಟ್ಟು 8.45ರ ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸಲಾಯಿತು.

ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಸ್ವಾಮೀಜಿ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.