ಅರಸೀಕೆರೆ ಗ್ರಾಮಾಂತರ ತಾಲೂಕಿನ ಆರ್ಯ ವೈಶ್ಯ ಸಂಘ, ವಾಸವಿ ಮಹಿಳಾ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. 
ನ್ಯೂಸ್

ಕನ್ನಿಕಾ ಪರಮೇಶ್ವರಿ ಸನ್ನಿಧಿಯಲ್ಲಿ ಶ್ರೀಕ್ರಷ್ಣ ಜನ್ಮಾಷ್ಟಮಿ

ಅರಸೀಕೆರೆ ಗ್ರಾಮಾಂತರ : ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಅದ್ದೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಶನಿವಾರ ಜರುಗಿತು.

ಕೃಷ್ಣ ಜನ್ಮಾಷ್ಟಮಿ ದಿನದಂದು ಕನ್ನಿಕಾ ಪರಮೇಶ್ವರಿಗೆ ಅಭಿಷೇಕ, ಕುಂಕುಮಾರ್ಚನೆ, ಕೃಷ್ಣನ ಅಲಂಕಾರ ಮಾಡಲಾಗಿತ್ತು. ದೇಗುಲಕ್ಕೆ ಬಂದ ಭಕ್ತರು ದೇವಿಗೆ ಸರತಿ ಸಾಲಿನಲ್ಲಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಾಸವಿ ಮಹಿಳಾ ಸಮಾಜ ವತಿಯಿಂದ 165 ವಿವಿಧ ಖಾದ್ಯಗಳ ಸಿಹಿತಿನಿಸುಗಳನ್ನು ಕೃಷ್ಣನಿಗೆ ನೈವೇದ್ಯಕ್ಕಾಗಿ ಇಡಲಾಗಿತ್ತು. ಮಹಿಳಾ ಸಮಾಜದ ವತಿಯಿಂದ ಅಲಂಕಾರಿಕ ಮಡಕೆಗಳ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಗೋಕುಲಾಷ್ಟಮಿ ದಿನ ಕೃಷ್ಣನ ನೆನೆದು ಗೋವಿಂದನ ನಾಮಸ್ಮರಣೆ ಮಾಡುತ್ತಾ ಭಜನೆ ಮಂತ್ರಘೋಷ ಜಪತಪಗಳು ನೆರವೇರಿದವು.

ಕೆಪಿಎಸ್ ವಿಶ್ವನಾಥ್ ದಂಪತಿ, ನಾಗೇಂದ್ರ, ಗಿರೀಶ್, ವೆಂಕಟೇಶ್, ಸುನಿಲ್, ಶ್ರೀಧರರ್ಮೂರ್ತಿ, ಪ್ರಸನ್ನಕುಮಾರ, ನಾರಾಯಣ ಇತರರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಾಸವಿ ಮಹಿಳಾ ಸಂಪದ ಅಧ್ಯಕ್ಷೆ ಸುಷ್ಮಾ ವೆಂಕಟೇಶ್, ಉಪಾಧ್ಯಕ್ಷೆ ಸಂಧ್ಯಾ ವಿಶ್ವನಾಥ್, ಕಾರ್ಯದರ್ಶಿ ಜ್ಯೋತಿ ಮಂಜುನಾಥ್, ಖಜಾಂಚಿ ಸುನೀತಾ ಸುನೀಲ್ , ಚಂದ್ರಿಕಾ, ಸಂಪ್ರೀತ್ ಇತರರು ಹಾಜರಿದ್ದರು.