ಪಿರಿಯಾಪಟ್ಟಣ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಕೃಷ್ಣೇಗೌಡ, ಶ್ರೀನಿವಾಸ್, ಎಂ.ಡಿ.ದೇವರಾಜು ರನ್ನು ಸಂಘದ ನಿರ್ದೇಶಕರು ಮತ್ತು ಸದಸ್ಯರು ಅಭಿನಂದಿಸಿದರು. ಶಿವಯೋಗ, ಮೋಹನ್ ಕುಮಾರ್, ಮಹದೇವಪ್ಪ, ರಾಮಚಂದ್ರ, ರವೀಂದ್ರ, ಪ್ರಕಾಶ್, ಧರ್ಮಪಾಲ್, ರಮೇಶ್, ಗಿರೀಶ್, ಭೈರಯ್ಯ, ಮತ್ತಿತರರು ಇದ್ದರು. 
ನ್ಯೂಸ್

ಕೃಷ್ಣೇಗೌಡ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

ಪಿರಿಯಾಪಟ್ಟಣ: ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೃಷ್ಣೇಗೌಡ ಮತ್ತು ಖಜಾಂಚಿಯಾಗಿ ಶ್ರೀನಿವಾಸ್, ರಾಜ್ಯ ಪರಿಷತ್ ಸದಸ್ಯರಾಗಿ ಎಂ.ಡಿ.ದೇವರಾಜು ಶನಿವಾರ ಚುನಾಯಿತರಾದರು.

ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ 34 ನಿರ್ದೇಶಕರು ಮತ ಚಲಾಯಿಸಿದ ನಂತರ ನಡೆದ ಎಣಿಕೆ ಕಾರ್ಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೃಷ್ಣೇಗೌಡ ಮತ್ತು ಸೋಮಶೇಖರ್ ತಲಾ 17 ಮತಗಳನ್ನು ಪಡೆದರು. ನಂತರ ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡಿದಾಗ ಕೃಷ್ಣೆಗೌಡರು ಲಾಟರಿಯಲ್ಲಿ ಗೆಲುವು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಖಜಾಂಚಿ ಸ್ಥಾನಕ್ಕೆ ಬಿ.ಎಲ್.ಉಷಾ ಮತ್ತು ಶ್ರೀನಿವಾಸ್ ಸ್ಪರ್ಧಿಸಿದ್ದರು. ಶ್ರೀನಿವಾಸ್ 21 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ, ಬಿ.ಎಲ್.ಉಷಾ 13 ಮತಗಳನ್ನು ಗಳಿಸಿ ಪರಾಭವ ಗೊಂಡರು. ರಾಜ್ಯ ಪರಿಷತ್ ಸದಸ್ಯರಾಗಿ ಎಂ.ಡಿ.ದೇವರಾಜು 19 ಮತಗಳನ್ನು ಪಡೆದು ಆಯ್ಕೆಯಾದರೆ, 15 ಮತಗಳನ್ನು ಪಡೆದ ಆರ್.ನಾಗೇಶ್ ಸೋಲನುಭವಿಸಿದರು.

ನಿರ್ದೇಶಕರ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಮಚಂದ್ರು ಬಣ ಪದಾಧಿಕಾರಿಗಳ ಆಯ್ಕೆಯಲ್ಲಿ ಸಹ ಇಬ್ಬರು ಪದಾಧಿಕಾರಿಗಳನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಸಂಘದಲ್ಲಿ ತಮ್ಮ ಹಿಡಿತ ಸಾಧಿಸಿದ್ದಾರೆ. ಚುನಾವಣಾಕಾರಿಯಾಗಿ ಎಸ್ ಕೆ ಎಸ್ ಟಿ ಬಾಲಕಿಯರ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಮಹದೇವ್ ಕಾರ್ಯನಿರ್ವಹಿಸಿದರು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಸಂಘದ ನಿರ್ದೇಶಕರು ಮತ್ತು ಸದಸ್ಯರು ಅಭಿನಂದಿಸಿದರು.

ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಶಿವಯೋಗ, ಮೋಹನ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವಪ್ಪ, ಮಾಜಿ ಅಧ್ಯಕ್ಷ ರಾಮಚಂದ್ರ, ರವೀಂದ್ರ, ಪ್ರಕಾಶ್, ಧರ್ಮಪಾಲ್, ರಮೇಶ್, ಗಿರೀಶ್, ಭೈರಯ್ಯ, ಪ್ರಶಾಂತ್, ಪುಟ್ಟರಾಜು, ಅನಂತ್, ಮಾಲಂಗಿ ಸುರೇಶ್ ಸೇರಿದಂತೆ ನೂತನ ನಿರ್ದೇಶಕರು ಹಾಗೂ ನೌಕರರ ಸಂಘದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದರು.