ನ್ಯೂಸ್

ಕೆಪಿಎಸ್​​ಸಿ ಪರೀಕ್ಷೆ: ಅಂಧ ಅಭ್ಯರ್ಥಿಗಳಿಗೆ ಹೆಚ್ಚುವರಿ ಪರೀಕ್ಷಾ ಸಮಯ ನಿಗದಿ

sspmiracle1982

ಬೆಂಗಳೂರು: ಕೆಪಿಎಸ್​​ಸಿ ಗೆಜೆಟೆಡ್ ಪ್ರೊಬೆಷನರ್ 106 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಗಸ್ಟ್ 24 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಿದ್ದು, ಕೆಲವೊಂದಿಷ್ಟು ಮಾರ್ಪಾಟುಗಳನ್ನು ಮಾಡಿದೆ.
ಹೈಕೋರ್ಟ್ ನ್ಯಾಯಾಲಯದ ಆದೇಶದ ಮೇರೆಗೆ ಈ ಪರೀಕ್ಷೆಗೆ ಅಂಧ / ದೃಷ್ಟಿಮಾಂದ್ಯ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರತಿ ಒಂದು ಗಂಟೆಗೆ 20 ನಿಮಿಷ ಹೆಚ್ಚುವರಿ ಸಮಯವನ್ನು ನೀಡಲಾಗುತ್ತಿದೆ. ಅಂಧ ಅಭ್ಯರ್ಥಿಗಳು ಲಿಪಿಕಾರರನ್ನು ತಾವೇ ಕರೆದುಕೊಂಡು ಬರಬೇಕೆಂದು ತಿಳಿಸಲಾಗಿದೆ.


ಯಾವುದೇ ಅಭ್ಯರ್ಥಿ ಲಿಪಿಕಾರರನ್ನು ಕರೆದುಕೊಂಡು ಬರಲು ಸಾಧ್ಯವಾಗದಿದ್ದಲ್ಲಿ ಅಂತಹ ಅಭ್ಯರ್ಥಿಗಳು ಆಯೋಗಕ್ಕೆ ಎಸ್​ಎಂಎಸ್​​ ಮೂಲಕ ತಿಳಿಸಿದಲ್ಲಿ ಅಂಥ ಅಭ್ಯರ್ಥಿಗಳಿಗೆ ಲಿಪಿಕಾರರನ್ನು ಒದಗಿಸಲು ಎಲ್ಲ ಸೂಕ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೆಪಿಎಸ್​ಸಿ ಪ್ರಕಟಣೆ ತಿಳಿಸಿದೆ.