ಚೌಳಹಿರಿಯೂರಿನ ಕೆಪಿಎಸ್ ಶಾಲೆಯಲ್ಲಿ ನಿವೃತ್ತ ಶಿಕ್ಷಕಿ ಡಿ.ಟಿ.ಚಂದ್ರಮ್ಮ ಅವರನ್ನು ಸನ್ಮಾನಿಸಲಾಯಿತು. ಡಿ.ಟಿ.ಬಸವರಾಜ್, ಪ್ರಕಾಶ್, ಜಿ.ಅಶೋಕ್‌ಕುಮಾರ್, ಟಿ.ಸಿ.ಮೋಹನ್, ಹನುಮಂತಪ್ಪ ಇತರರಿದ್ದರು. 
ನ್ಯೂಸ್

ಹಿರಿಯರ ಮಾರ್ಗದರ್ಶನದಿಂದ ಯಶಸ್ಸು

ಜಿ. ಗಜೇಂದ್ರ

ಚೌಳಹಿರಿಯೂರು: ಹಿರಿಯರ ಮಾರ್ಗದರ್ಶನದಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ನಿವೃತ್ತ ಶಿಕ್ಷಕಿ ಡಿ.ಟಿ.ಚಂದ್ರಮ್ಮ ತಿಳಿಸಿದರು.
ಕೆಪಿಎಸ್ ಶಾಲಾ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಾಠದ ಜತೆಗೆ ಸಂಸ್ಕಾರ ಕಲಿತು ಪಾಲಕರು ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ನಡೆದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು. ತಮ್ಮ ವೃತ್ತಿ ಜೀವನ ಕಾಟಿಗನರೆಯಲ್ಲಿ 11 ವರ್ಷ, ಅಜ್ಜಂಪುರದಲ್ಲಿ 4 ವರ್ಷ ಹಾಗೂ ಚೌಳಹಿರಿಯೂರಿನಲ್ಲಿ 13 ವರ್ಷ ವೃತ್ತಿಜೀವನ ತುಂಭಾ ಸಂತಸ ತಂದಿದೆ ಎಂದರು.
ಪ್ರಾಚಾರ್ಯ ಆರ್.ತಮ್ಮಯ್ಯ ಮಾತನಾಡಿ, ಶಾಲೆಗೆ ಉತ್ತಮ ಫಲಿತಾಂಶ ಬರುವಲ್ಲಿ ಶಿಕ್ಷಕಿ ಚಂದ್ರಮ್ಮ ಅವರ ಪರಿಶ್ರಮ ಹಾಗೂ ಕೊಡುಗೆ ಹಿರಿದು ಎಂದು ಹೇಳಿದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಡಿ.ಟಿ.ಬಸವರಾಜ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್, ಪ್ರಮುಖರಾದ ಜಿ.ಅಶೋಕ್‌ಕುಮಾರ್, ಟಿ.ಸಿ.ಮೋಹನ್, ಹನುಮಂತಪ್ಪ, ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.