ನ್ಯೂಸ್

ಕಲ್ಲಿದ್ದಲಿನ ಕೊರತೆ ಇಲ್ಲ ಎಂದ ಕೆಪಿಸಿ

ಬೆಂಗಳೂರು:

ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್(ಕೆಪಿಸಿಎಲ್) ಉಷ್ಣ ವಿದ್ಯುತ್ ಸ್ಥಾವರಗಳಿಗಾಗಿ ಸದ್ಯ 3 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನು ಹೊಂದಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಕೆಪಿಸಿಎಲ್ ಪ್ರಕಟಣೆ ತಿಳಿಸಿದೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್‌ಟಿಪಿಎಸ್) ಒಳಗೊಂಡಿರುವ 5020 ಮೆಗಾವ್ಯಾಟ್, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಬಿಟಿಪಿಎಸ್) 1700 ಮೆಗಾವ್ಯಾಟ್,

ಯರ್ಮರಸ್ 1600 ಸ್ಥಾಪಿತ ಸಾಮರ್ಥ್ಯದ 2 ಘಟಕಗಳನ್ನು ಹೊಂದಿರುವ ಉಷ್ಣ ವಿದ್ಯುತ್ ಕೇಂದ್ರಗಳಾಗಿದ್ದು, ಎಲ್ಲಾ ಘಟಕಗಳಿಗೂ 6 ದಿನಗಳಿಗೆ ಸಾಕಾಗಲಿದೆ.

ಮಳೆಗಾಲದಿಂದಾಗಿ ಎಲ್ಲಾ ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ಸತತವಾಗಿ ಏರುತ್ತಿದೆ ಮತ್ತು ಜಲ ಉತ್ಪಾದನೆಯು ಸಹ ಸುಧಾರಿಸಿದೆ ಎಂದು ಕೆಪಿಸಿ ವಿವರಿಸಿದೆ.

ರಾಜ್ಯದಲ್ಲಿ ಬೇಡಿಕೆಯು ದಿನಕ್ಕೆ ಸುಮಾರು 200 ರಿಂದ 210 ಮಿಲಿಯನ್ ಯೂನಿಟ್ ಇದೆ.

ನವೀಕರಿಸಬಹುದಾದ ಇಂಧನ ಉತ್ಪಾದನೆಯು ಪ್ರಸ್ತುತ ಬೇಡಿಕೆಯ ಸುಮಾರು ಶೇ.40 ರಿಂದ 45 ರಷ್ಟು ಇರುವುದರಿಂದ ಉಷ್ಣ ಉತ್ಪಾದನೆಯ ಬೇಡಿಕೆಯು ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದೆ.

ಉಷ್ಣ ವಿದ್ಯುತ್ ಸ್ಥಾವರಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡಿದ್ದು, ಉತ್ಪಾದನೆಗೆ ಕನಿಷ್ಠ 2 ರಿಂದ 3 ಘಟಕಗಳನ್ನು ಮಾತ್ರ ಮೀಸಲಿಡಲಾಗುವುದು ಎಂದು ವಿವರಿಸಲಾಗಿದೆ.