ನ್ಯೂಸ್

ಆಟೋಟಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ; ತರಳಬಾಳು ವಿದ್ಯಾಸಂಸ್ಥೆಯ ಪ್ರದಾನ ಕಾರ್ಯದರ್ಶಿ ಎಸ್.ಬಿ. ರಂಗನಾಥ್ ಅಭಿಪ್ರಾಯ

ಕೊಟ್ಟೂರು: ಕ್ರೀಡೆಯಲ್ಲಿ ಸ್ಪರ್ಧಿಸಿದ ಎಲ್ಲರೂ ಗೆಲ್ಲುವುದಿಲ್ಲ. ಆದರೆ ಸ್ಪರ್ಧಿಸುವುದು ಮುಖ್ಯ ಎಂದು ತರಳಬಾಳು ವಿದ್ಯಾಸಂಸ್ಥೆಯ ಪ್ರದಾನ ಕಾರ್ಯದರ್ಶಿ ಎಸ್.ಬಿ. ರಂಗನಾಥ್ ಹೇಳಿದರು.

ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಕ್ರೀಡಾಕೂಟಕ್ಕೆ ಭಾನುವಾರ ಕ್ರೀಡಾ ಜ್ಯೋತಿ ಬೆಳೆಗಿಸಿ ಮಾತನಾಡಿದರು. ನಂತರ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಬಿ.ಸಿ. ಮೂಗಪ್ಪ, ವಾಲಿಬಾಲ್ ಪಂದ್ಯವನ್ನು ಉದ್ಘಾಟಿಸಿದರು. ಜಿಲ್ಲೆಯ ಆರು ತಾಲೂಕುಗಳ 6 ಕಾಲೇಜ್ ವಿದ್ಯಾರ್ಥಿಗಳು ಮತ್ತು ತರಳಬಾಳು ವಿದ್ಯಾಸಂಸ್ಥೆಯ ಎಲ್ಲ ಕಾಲೇಜು ಕ್ರೀಡಾಪಟುಗಳು ಭಾಗವಹಿಸಿದ್ದರು.

ವಾಲಿಬಾಲ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಕಬಡ್ಡಿ, ಖೋಖೋ ಪಂದ್ಯಾವಳಿಗಳು ನಡೆದವು. ಹೊಳಲ್ಕೆರೆ ತಹಸೀಲ್ದಾರ್ ರಮೇಶ ಆಚಾರ್, ಸಂಪತ್ ಕುಮಾರ್, ನಂದಿ ವಿಕ್ರಂ, ಬಸವರಾಜ್, ರಾಘವೇಂದ್ರ ಮುಂತಾದವರಿದ್ದರು.