ನ್ಯೂಸ್

ಕೋಟೆ ಗಣೇಶೋತ್ಸವ ಸಮಿತಿ ಜತೆ ಎಡಿಜಿಪಿ ಚರ್ಚೆ

Shivamogga

ಶಿವಮೊಗ್ಗ: ಫ್ಲೆಕ್ಸ್ ವಿವಾದ ಮತ್ತು ಚಾಕು ಇರಿತದ ಬೆನ್ನಲ್ಲೇ ಶಿವಮೊಗ್ಗಕ್ಕೆ ಬಂದಿರುವ ಎಡಿಜಿಪಿ ಅಲೋಕ್‌ಕುಮಾರ್ ಅವರು ಮಂಗಳವಾರ ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನಕ್ಕೆ ತೆರಳಿ ಹಿಂದೂಮಹಾಸಭಾ ಗಣೇಶೋತ್ಸವ ಸಮಿತಿಯೊಂದಿಗೆ ಚರ್ಚೆ ನಡೆಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

ಪುರಾತನ ಭೀಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗಣಪತಿ ಪ್ರತಿಷ್ಠಾಪನೆ ಜಾಗ ಪರಿಶೀಲಿಸಿದರು. ಗಣೇಶೋತ್ಸವವನ್ನು ಸುಸೂತ್ರವಾಗಿ ನಡೆಸಿದರೆ ನಂತರ ಬಂದು ಧನ್ಯವಾದ ಹೇಳುವುದಾಗಿ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಮಹಾಸಭಾ ಸಮಿತಿಯಿಂದ 79ನೇ ಗಣೇಶೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಅಹಿತಕರ ಘಟನೆಗಳು ಆಗದಂತೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದೇನೆ. ಸಮಿತಿ ಸದಸ್ಯರು ಕೂಡ ಸ್ಪಂದಿಸಿದ್ದಾರೆ ಎಂದರು. ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಪ್ರಭಾಕರ್ ಮತ್ತಿತರರಿದ್ದರು.