ನ್ಯೂಸ್

ಜಾತಿ ಕೈಬಿಡಬೇಡಿ: 95 ಚೀಲಗಳಲ್ಲಿ ಸಿಎಂಗೆ ಬಂತು ಐದೂವರೆ ಲಕ್ಷ ಪತ್ರ

ಬೆಂಗಳೂರು: ಕೊರಮು, ಕೊರಚ, ಬೋವಿ ಮತ್ತು ಲಂಬಾಣಿ ಜನಾಂಗವನ್ನು ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡದಂತೆ ಕೋರಿ ಲಕ್ಷಾಂತರ ಮಂದಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ.

ಕೊರಚ, ಕೊರಮ, ಭೋವಿ ಮತ್ತು ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡುವಂತೆ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಈ ಜನಾಂಗದವರು ಈಗ ಪತ್ರ ಚಳವಳಿ ನಡೆಸಿದ್ದಾರೆ.

ಈ ಸಂಬಂಧ ಈ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡದಂತೆ ಕೋರಿರುವ ಪತ್ರಗಳನ್ನು 95 ಚೀಲಗಳು ರಾಜ್ಯದ ವಿವಿಧ ಭಾಗಗಳಿಂದ ಮುಖ್ಯಮಂತ್ರಿಗಳಿಗೆ ಆಗಮಿಸಿದೆ. ಈ ಚೀಲಗಳಲ್ಲಿ ಒಟ್ಟಾಗಿ 5.70 ಲಕ್ಷ ಪತ್ರಗಳು ಇರುವುದಾಗಿ ಮುಖ್ಯಮಂತ್ರಿ ಕಾರ್ಯಾಲಯ ಹೇಳಿದೆ.

ಪೋಸ್ಟ್‌ ಕಾರ್ಡ್‌ಗಳ ಮೂಲಕ ಇಷ್ಟೊಂದು ಮಂದಿ ಮನವಿಯನ್ನು ಕಳುಹಿಸಿದ್ದು, ಅದರ ಬಗ್ಗೆ ಶೀಘ್ರದಲ್ಲಿ ತೀರ್ಮಾನಿಸಿ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿಯವರ ಅಧೀನ ಕಾರ್ಯದರ್ಶಿ (ಆಡಳಿತ) ಜಿ.ಎಲ್‌.ಗಣೇಶ್‌ಕುಮಾರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.