ನ್ಯೂಸ್

ಸಿಂಗ್, ಜೊಲ್ಲೆ ಉಸ್ತುವಾರಿ ಬದಲಾವಣೆ

reportergvt

ಕೊಪ್ಪಳ: ವಿಜಯನಗರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಸರ್ಕಾರ ಶನಿವಾರ ಆದೇಶಿಸಿದೆ.


ಏಳು ತಿಂಗಳ ಹಿಂದಷ್ಟೇ ಸರ್ಕಾರ ಉಸ್ತುವಾರಿಗಳ ಬದಲಾವಣೆ ಮಾಡಿತ್ತು. ಮೊದಲು ಕೊಪ್ಪಳ ಉಸ್ತುವಾರಿಯಾಗಿದ್ದ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಗೆ ಧಾರವಾಡ ಉಸ್ತುವಾರಿವಹಿಸಿ ಕೊಪ್ಪಳ ಜವಾಬ್ದಾರಿ ಸಿಂಗ್ ಗೆ ನೀಡಲಾಗಿತ್ತು. ವಿಜಯನಗರಕ್ಕೆ ಮುಜರಾಯಿ ಸಚಿವೆ ಜೊಲ್ಲೆ ಉಸ್ತುವಾರಿಯಾಗಿದ್ದರು.

ಸದ್ಯ ಜೊಲ್ಲೆಗೆ ಕೊಪ್ಪಳ ಹಾಗೂ ಆನಂದ ಸಿಂಗ್ ಗೆ ವಿಜಯನಗರ ಉಸ್ತುವಾರಿ ವಹಿಸಿ ಮರು ಆದೇಶ ಮಾಡಲಾಗಿದೆ. ಜನೆವರಿ 24 ರಂದು ಎಲ್ಲ ಜಿಲ್ಲೆಗಳ ಉಸ್ತುವಾರಿಗಳ ಬದಲಾವಣೆ ಮಾಡಿ, ತವರು ಜಿಲ್ಲೆ ಬದಲು ಅನ್ಯ ಜಿಲ್ಲೆ ನೀಡಲಾಗಿತ್ತು. ಸದ್ಯ ಸಿ‌ಂಗ್ ಮತ್ತೆ ತವರು ಜಿಲ್ಲೆ ಉಸ್ತುವಾರಿ ಪಡೆದಿದ್ದು, ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ವಿಜಯನಗರದಲ್ಲೇ ಆಚರಿಸಲಿದ್ದಾರೆ.