ಗುಡಿಹಾಳ ಗ್ರಾಮದಿಂದ ಕೊಪ್ಪಳ ಗವಿಮಠಕ್ಕೆ ಆಹಾರ ಧಾನ್ಯ, ರೊಟ್ಟಿಗಳನ್ನು ಶುಕ್ರವಾರ ವಾಹನದಲ್ಲಿ ಕಳಿಸಲಾಯಿತು. ಯುವಕರಾದ ಶಿವಕುಮಾರ್ ಚುಕನಟ್ಟಿ, ಬಸವರಾಜ, ಚನ್ನಬಸವ, ಶರಣಪ್ಪ ರಕ್ಕಸಗಿ, ಪ್ರವೀಣ ಪಾಟೀಲ್, ಅಯ್ಯಪ್ಪ ಇತರರಿದ್ದರು. 
ನ್ಯೂಸ್

ಕೊಪ್ಪಳ ಅಜ್ಜನ ಜಾತ್ರೆಗೆ ಆಹಾರ ಧಾನ್ಯ, ರೊಟ್ಟಿ

ಮುದಗಲ್: ಪ್ರತಿ ವರ್ಷದಂತೆ ಗುಡಿಹಾಳ ಗ್ರಾಮದ ನೂರಾರು ಯುವಕರು ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ ನಿಮಿತ್ತ ದಾಸೋಹಕ್ಕೆ ಸಂಗ್ರಹಿಸಿದ ದೇಣಿಗೆ, ಆಹಾರ ಧಾನ್ಯ, ರೊಟ್ಟಿಗಳನ್ನು ವಾಹನ ಮೂಲಕ ಶುಕ್ರವಾರ ಕಳಿಸಿದರು.

ಕಳೆದ ಹತ್ತಾರು ವರ್ಷಗಳಿಂದ ಗ್ರಾಮದ ಭಕ್ತರು ನೀಡುವ ಅಕ್ಕಿ, ಜೋಳ, ಕಟ್ಟಿಗೆ, ಕಾಳು ಕಡಿ, ರೊಟ್ಟಿಗಳನ್ನು ವಾಹನದಲ್ಲಿ ತುಂಬಿ ಕಳಿಸಲಾಗುತ್ತದೆ. ಅಲ್ಲದೆ ಕೊಪ್ಪಳ ಗವಿಮಠ ಜಾತ್ರೆಗೆ ಸೇವೆ ಮಾಡಲು ಮಹಿಳೆಯರು ಸೇರಿ ನೂರಾರು ಜನರು ತೆರಳುತ್ತಾರೆ ಎಂದು ಯುವಕರು ತಿಳಿಸಿದರು.