ನ್ಯೂಸ್

ಕೂನಬೇವು ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಒತ್ತಾಯ

ರಾಣೆಬೆನ್ನೂರ: ನಗರದ ಹೊರವಲಯದಲ್ಲಿ ಕೆಶಿಪ್​ನಿಂದ ನಿಮಿರ್ಸುತ್ತಿರುವ ಬಿಳಿಗಿರಿರಂಗನದಿಟ್ಟು&ಸಮ್ಮಸಗಿ ರಾಜ್ಯ ಹೆದ್ದಾರಿಯ ಸರ್ವೀಸ್​ ರಸ್ತೆಯನ್ನು ಕೂನಬೇವು ಗ್ರಾಮಕ್ಕೆ ಸಂಪರ್ಕ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೂನಬೇವು ಗ್ರಾಮದ ಬಳಿ ಕೆಶಿಪ್​ನಿಂದ ನಿಮಿರ್ಸುತ್ತಿರುವ ರಾಜ್ಯ ಹೆದ್ದಾರಿಯಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ರೈತರು ಎತ್ತಿನಬಂಡಿ, ಟ್ರಾ$್ಯಕ್ಟರ್​ ಮೂಲಕ ಜಮೀನುಗಳಿಗೆ ತೆರಳಲು ತೊಂದರೆ ಉಂಟಾಗಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ರಸ್ತೆ ನಿಮಿರ್ಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಹನುಮಂತಪ್ಪ ಕಬ್ಬಾರ, ರಮೇಶ ಚಟ್ನಿ, ರುದ್ರಗೌಡ ಪಾಟೀಲ, ಚನ್ನವಿರಗೌಡ ಪಾಟೀಲ, ತಿಮ್ಮಣ್ಣ ಬಡ್ಡಪ್ಪನವರ, ಮೈಲಾರಪ್ಪ ಮಾಳಗುಡ್ಡಪ್ಪನವರ, ಚಂದ್ರಪ್ಪ ಗುಳೇದ, ಸೋಮಪ್ಪ ತಂಡೂರ, ಶಂಕ್ರು ಆಲೂರ ಮತ್ತಿತರರು ಉಪಸ್ಥಿತರಿದ್ದರು.