ಕೊಂಕಣಿ ಕವಿಗೋಷ್ಠಿಯಲ್ಲಿ ಕಲಾವಿದ ಕೆ. ಸುಂದರ ಗೌಡ ಅವರನ್ನು ಸನ್ಮಾನಿಲಾಯಿತು. ಜೋಕಿಂ ಸ್ಟಾö್ಯನಿ ಆಲ್ವಾರಿಸ್, ಪ್ರಕಾಶ್ ನೊರೊನ್ಹಾ, ನವೀನ್ ಲೋಬೊ ಉಪಸ್ಥಿತರಿದ್ದರು. 
ನ್ಯೂಸ್

ಚೌಕಟ್ಟುಗಳನ್ನು ಮೀರಿ ಬೆಳೆದ ಭಾಷೆ ಕೊಂಕಣಿ

Prashanth S Suvarna

ಪ್ರಮುಖ ಮುಖ್ಯಾಂಶಗಳು

  • ಕಾವ್ಯಾಂ ವ್ಹಾಳೊ-೧೪ ಶೀರ್ಷಿಕೆಯಡಿ ಕವಿಗೋಷ್ಠಿ
  • ಕೊಂಕಣಿ ಭಾಷೆಯ ಕುಡುಬಿ ಸಮುದಾಯದ ಕಲಾವಿದ ಕೆ. ಸುಂದರ ಗೌಡ ಅವರನ್ನು ಸನ್ಮಾನ
ಮಂಗಳೂರು: ಕೊಂಕಣಿ ಭಾಷೆ ಜಾತಿ, ಮತ ಭೇದವಿಲ್ಲದೆ ಎಲ್ಲಾ ಚೌಕಟ್ಟುಗಳನ್ನು ಮೀರಿ ಬೆಳೆದಿದೆ. ಎಲ್ಲ ಕೊಂಕಣಿಗರು ಅಕಾಡೆಮಿ ಜತೆ ನಿಕಟ ಸಂಪರ್ಕ ಇಟ್ಟುಕೊಳ್ಳಬೇಕು ಎಂದು ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಹೇಳಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿ ಸಭಾಂಗಣದಲ್ಲಿ ಕಾವ್ಯಾಂ ವ್ಹಾಳೊ-೧೪ ಶೀರ್ಷಿಕೆಯಡಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಚಯ ಪಾಂಬೂರು ಕಾರ್ಯದರ್ಶಿ ಪ್ರಕಾಶ್ ನೊರೊನ್ಹಾ ಮಾತನಾಡಿ, ಕೊಂಕಣಿ ಒಂದು ಮಹಾನ್ ಭಾಷೆ. ಕರ್ನಾಟಕದ ಪ್ರಮುಖ ಧರ್ಮಗಳಾದ ಹಿಂದು, ಮುಸ್ಲಿಂ, ಕೈಸ್ತ ಸಮದಾಯಗಳ ಜನರು ಮಾತನಾಡುವ ಭಾಷೆ. ಯಾವುದೇ ಭಾಷೆ ಉಳಿಯಬೇಕಾದರೆ ಭಾಷೆಯ ಬಂಧನವಿಲ್ಲದೆ ಕಾಲಕಾಲಕ್ಕೆ ಬಲಾವಣೆಗಳನ್ನು ಸೇರಿಸಿಕೊಂಡು ಮುಂದೆ ಹೋಗಬೇಕು ಎಂದರು.
ಕೊಂಕಣಿ ಭಾಷೆಯ ಕುಡುಬಿ ಸಮುದಾಯದ ಕಲಾವಿದ ಕೆ. ಸುಂದರ ಗೌಡ ಅವರನ್ನು ಸನ್ಮಾನಿಲಾಯಿತು. ಸದಸ್ಯ ನವೀನ್ ಲೋಬೊ ಉಪಸ್ಥಿತರಿದ್ದರು. ಕವಿಗಳಾದ ಡಾ.ವೆಂಕಟೇಶ್ ನಾಯಕ್ ಕವಿಗೋಷ್ಠಿ ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರ ನೀಡಿದರು. ಅವಿಲ್ ರಸ್ಕಿನ್ಹಾ, ಕುಸುಮಾ ಕಾಮತ್, ಸಂಜನಾ ಮಥಾಯಸ್, ಜೆರಿ ಬೋಂದೆಲ್, ಸುಮಾ ವಸಂತ್, ಪ್ರವೀಣ್ ತಾವ್ರೊ, ವಿಸ್ಮಯಾ ಲೋಬೊ, ಡಾ.ಸುಮತಿ ಕಾರ್ಕಳ ಕವಿತೆಗಳನ್ನು ವಾಚಿಸಿದರು. ಅಕಾಡೆಮಿ ಸದಸ್ಯ ರೊನಾಲ್ಡ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.