ನ್ಯೂಸ್

ಕೊಳ್ಳೇಗಾಲದ ಸಿದ್ದಪ್ಪಾಜಿ ದೇವಾಲಯದ ಹುಂಡಿಯಲ್ಲಿ ಬೆಂಕಿ!

arunakunigal

ಕೊಳ್ಳೇಗಾಲ: ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿ ದೇವಾಲಯದ ಹುಂಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದೇವಸ್ಥಾನದ ಸಿಬ್ಬಂದಿ ಆತಂಕಗೊಂಡ ಘಟನೆ ಇಂದು(ಮಂಗಳವಾರ) ಸಂಭವಿಸಿದೆ.

ಹುಂಡಿಯಿಂದ ಹೊಗೆ ಬರುತ್ತಿರುವುದನ್ನ ನೋಡಿ ಗಾಬರಿಗೊಂಡ ಸಿಬ್ಬಂದಿ, ಸಮೀಪ ಬಂದಾಗ ಹುಂಡಿಯೊಳಗೆ ಬೆಂಕಿ ಉರಿಯುತ್ತಿರುವುದನ್ನ ನೋಡಿ ತಕ್ಷಣ ಹುಂಡಿದ ರಂಧ್ರದೊಳಗೆ ನೀರು ಸುರಿದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ತಹಸೀಲ್ದಾರ್ ‌ಮಂಜುಳಾ, ಸಿಪಿಐ ಶಿವರಾಜ್ ಆರ್.ಮುಧೋಳ್, ಪಿಎಸ್ಐ ಮಂಜುನಾಥ್ ಪರಿಶೀಲನೆ ನಡೆಸಿದರು.

ಯಾರೋ ಕರ್ಪೂರ ಹಚ್ಚಿ ಹುಂಡಿಯ ರಂಧ್ರದೊಳಗೆ ಹಾಕಿರುವ ಶಂಕೆವ್ಯಕ್ತವಾಗಿದೆ. ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿಯನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.