ನ್ಯೂಸ್

ಸವಿತಾ ಮಹರ್ಷಿ ಮಹಿಳಾ ಸಂಘ ಉದ್ಘಾಟನೆ

ಕೊಳ್ಳೇಗಾಲ: ಪಟ್ಟಣದ ಸವಿತಾ ಸಮಾಜದ ಸಮುದಾಯ ಭವನದಲ್ಲಿ  ನೂತನ ಸವಿತಾ ಮಹರ್ಷಿ ಮಹಿಳಾ ಸಂಘ ಉದ್ಘಾಟನಾ  ಸಮಾರಂಭವನ್ನು ಮಂಗಳವಾರ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೈಸೂರು ಸವಿತಾ ಸಮಾಜ ಅಧ್ಯಕ್ಷ ಎನ್.ಆರ್.ನಾಗೇಶ್  ಅವರು, ಪ್ರಸ್ತುತ ಸವಿತಾ ಸಮಾಜದ ಬೆಳೆಯುತ್ತಿರುವ ಸಮಾಜ‌. ಕ್ಷೌರಿಕ ವೃತ್ತಿಯಲ್ಲಿ  ಯಶಸ್ಸು ಕಂಡು ಆರ್ಥಿಕವಾಗಿ ಮುಂದು ವರೆಯುತ್ತಿದ್ದಾರೆ. ಆದರೆ, ಪಾಲಕರು ತಮ್ಮ ವೃತ್ತಿಯನ್ನೆ ಮಕ್ಕಳಿಗೂ ಕಲಿಸಬೇಕು ಎನ್ನುವುದರ ಹೊರತಾಗಿ ಯೋಚನೆ ಮಾಡಬೇಕಿದೆ. ಕತ್ರಿ ಹಿಡಿಯುವ ಕೈಯಲ್ಲಿ ಪೆನ್ನು ಹಿಡಿದರೆ ಮಕ್ಕಳ ಭವಿಷ್ಯ ಮತಷ್ಟೂ ಉಜ್ವಲವಾಗುತ್ತದೆ.

ಓದು ಬಹಳ ಮುಖ್ಯ, ಶಿಕ್ಷಿತನಾದವನ್ನು ಏನನಾದರೂ ಸಾಧಿಸಬಲ್ಲ. ಆದ್ದರಿಂದ ಮಕ್ಕಳ ಓದನ್ನು ವೃತ್ತಿ ಮಾಡುವಂತೆ ಮೊಟಕುಗೊಳಿಸದೆ ಅವರ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಬೇಕು. ಆಗಿದ್ದಾಗ ಮಾತ್ರ ನಮ್ಮ ಸಮಾಜ  ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು. ಕರ್ನಾಟಕ ನಾಡು ನುಡಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ.ಲಕ್ಷ್ಮೀ,  ಗುಂಡ್ಲುಪೇಟೆ ಸವಿತಾ ಸಮಾಜದ ಅಧ್ಯಕ್ಷ ಕೃಷ್ಣ, ಯಳಂದೂರು ತಾಲ್ಲೂಕು ಅಧ್ಯಕ್ಷ ಶ್ರೀಕಂಠಸ್ವಾಮಿ, ಮ.ಬೆಟ್ಟದ ಗ್ರಾಮ ಪಂಚಾಯತಿ ಸದಸ್ಯೆ ರತ್ನಮ್ಮ, ಕೊಳ್ಳೇಗಾಲ ಸವಿತಾ ಸಮಾಜದ ಅಧ್ಯಕ್ಷ  ಸೋಮಣ್ಣ,  ಮಹಿಳಾ ಸಂಘ ಅಧ್ಯಕ್ಷೆ ದೊಡ್ಡತಾಯಮ್ಮ, ಉಪಾಧ್ಯಕ್ಷೆ ಶೋಭ, ಕಾರ್ಯದರ್ಶಿ ಮಹೇಶ್ವರಿ (ಪುಟ್ಟಿ), ಖಜಾಂಚಿ ಪುಟ್ಟಿ(ರಾಧ) ಸೇರಿದಂತೆ ಇತರರು ಇದ್ದರು.