ಕೇರಳ: ವರದಕ್ಷಿಣೆ ( dowry ) ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬಳು ತನ್ನ ಮಗಳನ್ನು ಮೊದಲು ಕೊಂದು ನಂತರ ಪ್ರಾಣ ಬಿಟ್ಟಿರುವ ಘಟನೆ ಶಾರ್ಜಾದಲ್ಲಿ ನಡೆದಿದೆ.
ಶಾರ್ಜಾದ ಅಲ್ ನಹ್ದಾದಲ್ಲಿ ವಾಸಿಸುತ್ತಿದ್ದ ವಿಪಂಜಿಕಾ ಅವರ ಪತಿ ನಿಧೀಶ್ ದಂಪತಿ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ವಿಪಂಜಿಕಾ ಮಣಿ ತನ್ನ ಒಂದೂವರೆ ವರ್ಷದ ಮಗಳು ವೈಭವಿಯನ್ನು ಹತ್ಯೆ ಮಾಡಿ ಬಳಿಕ ಪ್ರಾಣ ಕಳೆದುಕೊಂಡಿದ್ದಾರೆ.
ತಾಯಿಯ ದೂರಿನ ಪ್ರಕಾರ, ಕೊಟ್ಟ ವರದಕ್ಷಿಣೆ ಸಾಕಾಗುವುದಿಲ್ಲ ಎಂದು ಹೇಳಿ ವಿಪಂಜಿಕಾಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ್ದರು. ಆಕೆ ತುಂಬಾ ಸುಂದರವಾಗಿದ್ದು, ಆಕೆಯ ಗಂಡನ ಬಣ್ಣಕಪ್ಪು ಹೀಗಾಗಿಆಕೆಯೂ ಕೂಡ ಕೆಟ್ಟಾಗಿ ಕಾಣೇಕೆಂದು ಆಕೆಯ ತಲೆ ಬೋಳಿಸಿದ್ದ. ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ, ವಿವಾಹೇತರ ಸಂಬಂಧಗಳನ್ನು ಪ್ರಶ್ನಿಸಿದಾಗ ಆಕೆಗೆ ವಿಚ್ಛೇದನ ನೋಟಿಸ್ ನೀಡಲಾಗಿದೆ. ವರದಕ್ಷಿಣೆಗಾಗಿ ವಿಪಂಜಿಕಾ ಅವರಿಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗಿದೆ. ಶಿಕ್ಷೆಯಾಗಬೇಕು, ಆಗ ಮಾತ್ರ ಮಗಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೊಲ್ಲಂ ಮೂಲದ ವಿಪಂಜಿಕಾ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಆತ್ಮಹತ್ಯೆ ಪತ್ರವನ್ನು ಪೋಸ್ಟ್ ಮಾಡಿದ್ದರು. ಆಕೆಯ ಮಾವ ಕೂಡ ಲೈಂಗಿಕ ಕಿರುಕುಳ ನೀಡಿದ್ದ ಎಂಬುದು ತಿಳಿದುಬಂದಿದೆ.
ಆತ್ಮಹತ್ಯೆ ಪತ್ರದಲ್ಲಿ ಏನಿದೆ?:
ವಿಪಂಜಿಕಾ ತನ್ನ ಗಂಡನ ಮನೆಯಲ್ಲಿ ತನ್ನ ಮಾವ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ ಮತ್ತು ನಿಧೀಶ್‌ಗೆ ಅದರ ಬಗ್ಗೆ ತಿಳಿಸಿದಾಗ, ಅವನು ಏನೂ ಮಾಡಲಿಲ್ಲ ಮತ್ತು ತನ್ನ ತಂದೆಗಾಗಿಯೂ ಅವಳನ್ನು ಮದುವೆಯಾಗಿದ್ದೇನೆಂದು ಹೇಳಿದ್ದ, ನನಗೆ ಚಿತ್ರಹಿಂಸೆ ನೀಡಿ ನಾಯಿಯಂತೆ ಹೊಡೆದನು. ನನಗೆ ಇನ್ನು ಸಹಿಸಲು ಸಾಧ್ಯವಿಲ್ಲ, ಅವರನ್ನು ಬಿಡಬೇಡಿ ಎಂದು ಆಕೆ ಬರೆದಿದ್ದಳು.