ನ್ಯೂಸ್

ಜಲಪ್ರಳಯ ಆಗಲಿದ್ದು ಒಂದೆರಡು ದೇಶಗಳೇ ಮುಚ್ಚಿಹೋಗಲಿವೆ ಎಂದು ಕೋಡಿ ಮಠದ ಶ್ರೀ ಭವಿಷ್ಯವಾಣಿ!

Webdesk - Athul Damale

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದು, ಪ್ರಕೃತಿ ಮಾತೆ ಮುನಿದಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಜಲಪ್ರಳಯವೇ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಈ ಹಿಂದೆಯೂ ಕೋಡಿಮಠದ ಶ್ರೀಗಳು ಒಂದು ಸರ್ಕಾರ ಬಂದು ಸ್ಥಿರ ಸರ್ಕಾರ ಇರುತ್ತದೆ ಎಂದು ಭವಿಷ್ಯ ನುಡಿದಿದ್ದರು.

ಇದೀಗ ಕೋಡಿಮಠದ ಶ್ರೀಗಳು "ರಾಜ್ಯದಲ್ಲಿ ಸಾಕಷ್ಟು ಮಳೆ ಬಂದು ಜಲಪ್ರಳಯ ಆಗುವ ಲಕ್ಷಣ ಇದೆ. ಜಾಗತಿಕ ಮಟ್ಟದಲ್ಲೂ ದುರಂತ ಆಗುವುದಿದೆ. ಜಗತ್ತಿಗೆ ಮೂರು ಗಂಡಾಂತರ ಕಾದಿದ್ದು ಒಂದೆರಡು ದೇಶಗಳೇ ಮುಚ್ಚಿ ಹೋಗಲಿವೆ" ಎಂದಿದ್ದಾರೆ.

ಇನ್ನು ಜನರ ಅಕಾಲಿಕ ಮೃತ್ಯು ಆಗುವ ಸೂಚನೆ ಇದ್ದು ವಿಜಯದಶಮಿಯಿಂದ ಸಂಕ್ರಾಂತಿವರೆಗೆ ಜಗತ್ತಿನಲ್ಲಿ ದುರ್ಘಟನೆ ನಡೆಯಲಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಆಳುವವರು ಅರಿತರೆ ಗಂಡಾತರದಿಂದ ಪಾರಾಗಬಹುದು. ಇಲ್ಲದಿದ್ದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎಂದು ಸ್ವಾಮೀಜಿ ಹೇಳಿದ್ದಾರೆ.

ಕರುನಾಡಿಗೂ ಇದೆ ಕೆಲವೊಂದು ಆಪತ್ತು!

ಶಿವಾನಂದ ಶಿವಯೋಗಿ ಸ್ವಾಮೀಜಿ ಕನ್ನಡ ನಾಡಿಗೆ ಇರುವ ಕೆಲ ಆಪತ್ತುಗಳ ಬಗ್ಗೆಯೂ ಭವಿಷ್ಯವಾಣಿ ನುಡಿದಿದ್ದು "ಕೆಲ ಸಾವು ನೋವುಗಳು ಆಗುತ್ತವೆ, ದೈವ ಕೃಪೆಯಿಂದ ಜನರು ಪಾರಾಗಬಹುದು" ಎಂದಿದ್ದಾರೆ.

ಇನ್ನು ಭವಿಷ್ಯವಾಣಿಯಲ್ಲಿ ಸ್ವಾಮೀಜಿ, "ಭಾರತದಲ್ಲಿ ಒಂದು ದುರ್ಘಟನೆ ಆಗಲಿದ್ದು ತಪ್ಪಿಸುವಂತದ್ದು ಆಳುವವರ ಕೈಯಲ್ಲಿದೆ. ಜಗತ್ತಿನ ಸಾಮ್ರಾಟರು ತಲ್ಲಣ ಆಗ್ತಾರೆ. ಬಡವರಿಗೆ ಗ್ಯಾರಂಟಿ ಒಳ್ಳೆಯದೇ. ಯಾವ ಹೆಣ್ಣಿಗೆ ಸ್ವತಂತ್ರ ಇರಲಿಲ್ಲವೋ ಅಂತಹ ಹೆಣ್ಣು ಈಗ ಸ್ವತಂತ್ರವಾಗಿ ಹೊರಗಡೆ ಬಂದಿದ್ದಾಳೆ" ಎಂದಿದ್ದಾರೆ.

ಕಾಂಗ್ರೆಸ್​ ಪೂರ್ಣಾವಧಿ ಅಧಿಕಾರ ನಡೆಸುತ್ತಾ?

ಇನ್ನು ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸುವ ವಿಚಾರವಾಗಿ ಕೋಡಿಮಠದ ಶ್ರೀಗಳು, "ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ. ಆದರೆ ಊರಿನಲ್ಲಿನ ಎಲ್ಲಾ ವಾಸನೆ ಮೂಗಿಗೆ ಮುಟ್ಟುತ್ತೆ" ಎಂದಿದ್ದಾರೆ.