ನ್ಯೂಸ್

ಕೊಡಗು ಜಿಲ್ಲಾ ಕಾಂಗ್ರೆಸ್‌ನಿಂದ ನೆಹರೂ ಜನ್ಮ ದಿನಾಚರಣೆ

ಮಡಿಕೇರಿ: ಜವಹರಲಾಲ್ ನೆಹರುರವರ ಜನ್ಮದಿನಾಚರಣೆಯನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್ ಅಧ್ಯಕ್ಷತೆಯಲ್ಲಿ ಸೋಮವಾರ ಆಚರಿಸಲಾಯಿತು.


ಈ ಸಂದರ್ಭ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶದಲ್ಲಿ ಶೇ೮೦ ರಷ್ಡು ಅನಕ್ಷರತೆ ಇತ್ತು. ನೆಹರೂ ಪ್ರಧಾನಿಯಾದ ನಂತರ ದೇಶದ ಸಾಕ್ಷರತೆ ಹೆಚ್ಚಿಸುವ ಮೂಲಕ ಭಾರತವನ್ನು ನವ ನಿರ್ಮಾಣ ಮಾಡಿದರು. ಕೃಷಿ, ಕೈಗಾರಿಕೆ, ವಿಜ್ಞಾನ, ಕ್ರೀಡಾ ಕ್ಷೇತ್ರಗಳಿಗೆ ವಿನೂತನ ಕಾಯಕಲ್ಪ ನೀಡುವ ಮೂಲಕ ಭಾರತವನ್ನು ಸಧೃಡಗೊಳಿಸಿದರು ಎಂದು ಹೇಳಿದರು.


ಮಾಜಿ ಮೂಡ ಅಧ್ಯಕ್ಷ ಚುಮ್ಮಿ ದೇವಯ್ಯ, ಮಾಜಿ ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ಡಿ.ಸಿ.ಸಿ ಸದಸ್ಯರಾದ ಅಬ್ದುಲ್ ರಜ್ಹಾಕ್, ಕಟ್ರತನ ವೆಂಕಟೇಶ್, ಟಿ.ಎಚ್.ಉದಯ್ ಕುಮಾರ್, ಪ್ರಕಾಶ್ ಆಚಾರ್ಯ, ಅಯಿಲಪಂಡ ಪುಷ್ಪ ಪೂಣಚ್ಚ, ಅಲ್ಪ ಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷ ಕಲೀಲ್ ಭಾಷ, ನಗರ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಫ್ಯಾನ್ಸಿ ಪಾರ್ವತಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.