ಕೋಲಾರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೋಚಿಮುಲ್ ಒಕ್ಕೂಟದ ಸರ್ವ ಸದಸ್ಯರ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಉದ್ಘಾಟಿಸಿದರು. ಡಿ.ವಿ.ಹರೀಶ್, ಗೋಪಾಲ್ ಮೂರ್ತಿ, ಅಶ್ವಥ್‌ನಾರಾಯಣಬಾಬು, ಕಾಡೇನಹಳ್ಳಿ ನಾಗರಾಜ್ ಇದ್ದರು. 
ನ್ಯೂಸ್

ಕೋಚಿಮುಲ್ ವಿಭಜನೆ, ಚುನಾವಣೆಯದೇ ಚರ್ಚೆ

ಕಿರುವಾರ ಎಸ್.ಸುದರ್ಶನ್

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಸಹಕಾರ ಸಂಘಗಳ ಒಕ್ಕೂಟದಲ್ಲಿ (ಕೋಚಿಮುಲ್) ವಿವಿಧ ಹುದ್ದೆಗಳ ನೇಮಕಾತಿ ಸೇರಿ ಹಲವು ಹಗರಣ ಈಗಿನ ಆಡಳಿತ ಮಂಡಳಿ ಅವಧಿಯಲ್ಲಿ ನಡೆದಿವೆ. ಅಧೀಕಾರಾವಧಿ ಮುಗಿದಿದ್ದರೂ ಏಕೆ ಅಧಿಕಾರದಲ್ಲಿದ್ದೀರಾ, ಕೂಡಲೇ ಚುನಾವಣೆ ನಡೆಸಿ…

ಇದು, ನಗರ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಕೋಚಿಮುಲ್ ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಅಧ್ಯಕ್ಷತೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಸರ್ವ ಸದಸ್ಯರು ಒತ್ತಾಯಿಸಿದ ಪರಿ.
ಚುನಾವಣೆ ನಡೆಸುವುದು, ವಿಭಜನೆ ಮಾಡುವ ಕುರಿತು ಹಲವರು ಧ್ವನಿ ಎತ್ತಿದರು. ಜತೆಗೆ ಮಾಜಿ ನಿರ್ದೇಶರು, ಆಡಳಿತ ಮಂಡಳಿ ಅಧ್ಯಕ್ಷರ ನಡುವೆ ಆರೋಪ-ಪ್ರತ್ಯಾರೋಪಕ್ಕೂ ಸಭೆ ಸಾಕ್ಷಿಯಾಯಿತು.
ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಒಕ್ಕೂಟವನ್ನು ಭೌಗೋಳಿಕವಾಗಿ ವಿಭಜನೆ ಮಾಡಲು ಈ ಹಿಂದಿನ ಸರ್ಕಾರ ಮುಂದಾಗಿದ್ದರೂ ತಡೆಯಾಜ್ಞೆ ತಂದು ಅನ್ಯಾಯ ಮಾಡಲಾಗಿದೆ. ಕೂಡಲೇ ಸರ್ಕಾರ, ವಿಭಜನೆ ಮಾಡಿ ಚುನಾವಣೆ ನಡೆಸಬೇಕು. ಚಿಂತಾಮಣಿಯಲ್ಲಿ ಉನ್ನತ ಶಿಕ್ಷಣ ಸಚಿವರಿದ್ದರೂ ಸಹ ಐಸ್ ಕ್ರೀಂ ಘಟಕಕ್ಕೆ ಒಕ್ಕೂಟ ಹಳೆಯ ಜಾಗದಲ್ಲೇ ಸ್ಥಾಪನೆಗೆ ಮುಂದಾಗಿದ್ದಾರೆ. ಹೊಸ ಜಾಗವನ್ನು ಹುಡುಕುವ ಕೆಲಸ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದರು.
ನುಕ್ಕನಹಳ್ಳಿ ಡೇರಿ ಪ್ರತಿನಿಧಿ ಎನ್.ಎನ್.ಶ್ರೀರಾಮ್ ಮಾತನಾಡಿ, ನಂದಿನಿ ಮಳಿಗೆಗಳಿಗೆ ಹಾಲಿನ ಉತ್ಪನ್ನ ನೀಡಿದ್ದು, ಸುಮಾರು ೩.೩೭ ಕೋಟಿ ರೂ. ಹಣ ಬಾಕಿ ಇದ್ದು, ವಸೂಲಿ ಮಾಡಲು ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದೆ. ಹುದ್ದೆಗಳ ನೇಮಕಾತಿಗೆ ಸಂಬಂಸಿದಂತೆ ಒಕ್ಕೂಟವನ್ನು ಬೀದಿಯಲ್ಲಿ ಹರಾಜು ಹಾಕಲಾಗಿದೆ ಎಂದು ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕೆ.ವೈ.ನಂಜೇಗೌಡ, ಬಾಕಿ ಹಣ ಕೂಡಲೇ ಅಧಿಕಾರಿಗಳು ವಸೂಲಿ ಮಾಡಬೇಕು, ನೇಮಕಾತಿ ವಿಚಾರವು ಈಗಾಗಲೇ ಕೋರ್ಟ್ನಲ್ಲಿದ್ದು, ಈಗ ಆ ಚರ್ಚೆ ಬೇಡ ಎಂದು ವಿನಂತಿಸಿದರು.
ಕೋಚಿಮುಲ್ ನಿರ್ದೇಶಕರಾದ ಜಯಸಿಂಹ ಕೃಷ್ಣಪ್ಪ, ಕೆ.ಎನ್.ನಾಗರಾಜ್, ವಿ.ಮಂಜುನಾಥರೆಡ್ಡಿ, ಜೆ.ಕಾಂತರಾಜು, ವೈ.ಬಿ.ಅಶ್ವತ್ಥನಾರಾಯಣಬಾಬು, ಡಿ.ವಿ.ಹರೀಶ್, ಎನ್.ಹನುಮೇಶ್, ಎನ್.ಸಿ.ವೆಂಕಟೇಶ್, ಆರ್.ಶ್ರೀನಿವಾಸ್, ಆದಿನಾರಾಯಣರೆಡ್ಡಿ, ಸುನಂದಮ್ಮ, ಕಾಂತಮ್ಮ, ಷಂಷೀರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ, ಪಶುಪಾಲನಾ ಪಶುವೈದ್ಯ ಸೇವಾ ಇಲಾಖೆಯ ಡಾ.ಜಿ.ಟಿ.ರಾಮಯ್ಯ, ಮಾರುಕಟ್ಟೆ ವಿಭಾಗದ ಡಾ.ಶ್ರೀನಿವಾಸಗೌಡ, ನಾಗೇಶ್ ಮತ್ತಿತರರಿದ್ದರು

ಕೋಚಿಮುಲ್ ವಿಭಜಿಸಿ
ಕೋಚಿಮುಲ್ ಒಕ್ಕೂಟದ ಮಾಜಿ ಅಧ್ಯಕ್ಷರನ್ನು ಸಭೆಯಲ್ಲಿ ಗೌರವಯುತವಾಗಿ ನಡೆಸಿಕೊಳ್ಳಬೇಕು. ಶೀಘ್ರ ಕೋಚಿಮುಲ್ ವಿಭಜನೆ ಮಾಡಿ ಚುನಾವಣೆ ನಡೆಸಬೇಕು ಎಂದು ಚಿಕ್ಕಬಳ್ಳಾಪುರ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತಾ ಮುನಿಯಪ್ಪ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಂಜೇಗೌಡ, ಮುಂದಿನ ಸಭೆಯಲ್ಲಿ ಎಲ್ಲ ಮಾಜಿ ಅಧ್ಯಕ್ಷರನ್ನು ವೇದಿಕೆಯಲ್ಲಿ ಕೂರಿಸಲು ಅನುಮೋದನೆ ಪಡೆಯಲಾಗುವುದು. ಕೋಚಿಮುಲ್ ವಿಭಜನೆಗೆ ಹಿಂದಿನ ವಿಶೇಷ ಸಭೆಯಲ್ಲೇ ಅನುಮೋದನೆ ಸಿಕ್ಕಿದೆ. ಕೂಡಲೇ ಪ್ರತ್ಯೇಕ ಆಡಳಿತಾಧಿಕಾರಿ ನೇಮಿಸಿ ಚುನಾವಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಡಿ.ಕೆ.ರವಿ ಹೆಸರಿಡಲು ಅನುಮೋದನೆ
ಒಕ್ಕೂಟದಿಂದ ಹೊಳಲಿ ಬಳಿ ನಿರ್ಮಾಣವಾದ ಸೋಲಾರ್ ಪ್ಲಾಂಟ್‌ಗೆ ದಿ.ಜಿಲ್ಲಾಽಕಾರಿ ಡಿ.ಕೆ.ರವಿ ಹೆಸರಿಡುವಂತೆ ತುರಾಂಡಹಳ್ಳಿ ಡೇರಿ ಅಧ್ಯಕ್ಷ ಟಿ.ಎಂ.ವೆಂಕಟೇಶ್ ಒತ್ತಾಯಿಸಿದರು. ಇದಕ್ಕೆ ಸರ್ವ ಸದಸ್ಯರು ಅನುಮೋದನೆ ನೀಡಿದರು. ಕೋಚಿಮುಲ್ ನೌಕರರು-ಸಿಬ್ಬಂದಿ ಸಾಮಾನ್ಯ ಕಲ್ಯಾಣ ಟ್ರಸ್ಟ್ಗೆ ಸಂಗ್ರಹವಾಗಿರುವ ಹಣ ಎಷ್ಟು, ನೌಕರರು, ಸಿಬ್ಬಂದಿಗೆ ಖರ್ಚು ಮಾಡುವ ಬದಲು ಅನ್ಯ ಕಾರ್ಯಗಳಿಗೆ ಖರ್ಚು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೆ.ವೈ.ನಂಜೇಗೌಡ, ಕಲ್ಯಾಣ ಟ್ರಸ್ಟ್ಗೆ ಸಂಗ್ರಹವಾಗಿರುವ ಹಣದ ಮಾಹಿತಿ ನೀಡುವಂತೆ ಅಧಿ

ಕಾರಿಗಳಿಗೆ ಸೂಚಿಸಿದರು.

  • ಹತಾಶೆಯಿಂದ ಆರೋಪ
    ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಆದರೆ ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್‌ಗೆ ಸೋಲಿನ ಹತಾಶೆಯಿಂದ ಮತಿಭ್ರಮಣೆಯಾಗಿದ್ದು, ಅವರ ಅವಽಯಲ್ಲಿ ಯಾವುದೇ ಕೆಲಸ ಮಾಡದೆ ಕೇವಲ ಉಪ ಗುತ್ತಿಗೆಗಳನ್ನು ನೀಡಿದ್ದೇ ಅವರ ಕೊಡುಗೆ ಎಂದು ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಆರೋಪಿಸಿದರು.
    ರಾಜಕೀಯವಾಗಿ ಹೆಸರು ಪಡೆಯುವ ಉದ್ದೇಶದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ವಿಭಜನೆಗೆ ಆತುರ ಬಿದ್ದಾಗ ಚಿಕ್ಕಬಳ್ಳಾಪುರದಲ್ಲಿ ಪ್ಯಾಕಿಂಗ್ ಘಟಕ ಇಲ್ಲದಿರುವುದು ಅರಿವಾಗಿರಲಿಲ್ಲವೇ ಎಂದು ಪ್ರಶ್ನಿಸಿದರು. ಇನ್ನು ಆಂಧ್ರದಲ್ಲಿ ಕಳೆದ ಸರ್ಕಾರವು ತಿರುಪತಿ ಲಾಡು ತಯಾರಿಕೆಗೆ ನಂದಿನಿ ತುಪ್ಪ ಬಳಕೆಯಾಗುತ್ತಿದ್ದ ಅವಕಾಶ ತಪ್ಪಿಸಿತ್ತು, ಸ್ವಾಮಿಯು ಈಗ ಪುನಃ ನಂದಿನಿ ತುಪ್ಪಕ್ಕೆ ಅವಕಾಶ ನೀಡಿದ್ದಾರೆ. ಇದು ಕೋಲಾರ ಅಲ್ಲದೆ ಎಲ್ಲ ಒಕ್ಕೂಟಗಳಿಗೂ ಲಾಭ, ಬೇಡಿಕೆಯೂ ಹೆಚ್ಚಾಗಲಿದೆ. ತಿರುಪತಿಯಂತಹ ಘಟನೆ ನಮ್ಮ ರಾಜ್ಯದಲ್ಲಿ ನಡೆಯಬಾರದು ಎಂದು ನಂದಿನಿ ತುಪ್ಪ ಬಳಕೆಗೆ ಸರ್ಕಾರ ಆದೇಶ ನೀಡಿರುವುದು ಸ್ವಾಗತಾರ್ಹ ಎಂದರು.