ನ್ಯೂಸ್

VIDEO: ಈ ಪುಟಾಣಿಗೆ ಇನ್​ಸ್ಟಾಗ್ರಾಮ್​ನಲ್ಲಿ 13 ಲಕ್ಷ ಫಾಲೋವರ್ಸ್​: ಅಂಥದ್ದೇನು ವಿಶೇಷ ಅಂತೀರಾ?

suchetana

ಟರ್ಕಿ: ಈ ಮುದ್ದು ಪುಟಾಣಿಯ ವಯಸ್ಸು ಇನ್ನೂ ಒಂದು ವರ್ಷ ತುಂಬಿಲ್ಲ. ಹೆಸರು ಕೊಬೆ. ಈ ಪಾಪುವಿನ ಹೆಸರಿನಲ್ಲಿ ಅದಾಗಲೇ ಇನ್​ಸ್ಟಾಗ್ರಾಂ ಖಾತೆಯನ್ನೂ ತೆರೆದಾಗಿದೆ. ಈತನಿಗೆ ಇದಾಗಲೇ ಬೆಂಬಲಿಗರ ಸಂಖ್ಯೆ 13 ಲಕ್ಷವನ್ನು ದಾಟಿದೆ.

ಅಷ್ಟಕ್ಕೂ ಈ ಇನ್​ಸ್ಟಾಗ್ರಾಂ ತೆರೆದಿರುವುದು ಅಡುಗೆ ಸಂಬಂಧಿ ಮಾಹಿತಿ ನೀಡಲು. ತನ್ನ ಪುಟ್ಟಪುಟಾಣಿ ಕೈಗಳಿಂದ ಈ ಬಾಲಕ ಒಂದಿಷ್ಟು ತರಕಾರಿಗಳನ್ನು ಬಾಯಲ್ಲಿ ಹಾಕಿಕೊಳ್ಳುವುದನ್ನು ನೋಡುವುದೇ ಅಂದ.

ಅಂದ ಹಾಗೆ Chef Kobe ಎಂಬ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ.ಪೋಷಕರು ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಅಡುಗೆ ಸಂಬಂಧಿತ ಮಾಹಿತಿಗಳನ್ನು ಇದರಲ್ಲಿ ಅಪ್​ಲೋಡ್​ ಮಾಡಲಾಗುತ್ತದೆ. ಬಟರ್​ಚಿಕನ್, ನಾನ್​ನಿಂದ ಮಾಕ್ ಮತ್ತು ಚೀಸ್ ತನಕ ಎಲ್ಲ ಬಗೆಯ ಅಡುಗೆಗಳನ್ನು ಹೇಗೆ ಮಾಡುವುದು ಎಂಬ ವೀಡಿಯೋ ಪಾಠ ಇದರಲ್ಲಿ ಹೇಳಿಕೊಡಲಾಗುತ್ತದೆ.

"ನನ್ನ ಅಮ್ಮನ ಜತೆ ಬಟರ್ ಚಿಕನ್ ಹಾಗೂ ನಾನ್ ಮಾಡ್ತೀನಿ! ಈ ಸ್ಟೌ ಮೇಲೆ ಸಾಕಷ್ಟು ಕೆಲಸಗಳನ್ನು ಮಾಡಲು ಆಕೆ ಸಹಾಯ ಮಾಡುತ್ತಾಳೆ. ನಾನು ಕೆಲವು ತಪ್ಪು ಮಾಡ್ತೇನೆ. ಆದರೆ ಓಕೆ. ಇದನ್ನು ಮಾಡಲು ತುಂಬ ಸಂತೋಷ ಆಗುತ್ತದೆ!!! ನಾನ್ ತಿನ್ನುವಾಗ ಇಷ್ಟವಾಗುತ್ತದೆ. ನನಗೆ ನಾನ್ ಅಂದರೆ ಪ್ರೀತಿ" ಎಂದು ಮಗುವೇ ಹೇಳಿದಂತೆ ವೀಡಿಯೋ ತೋರಿಸುವ ಮೂಲಕ ಪಾಠವನ್ನು ಹೇಳಿಕೊಡಲಾಗುತ್ತದೆ.

ಇದನ್ನು ನೋಡಿಯೇ ಜನರು ಈ ಪಾಪುವಿನ ಫಾಲೋವರ್ಸ್​ ಆಗಿಬಿಟ್ಟಿದ್ದಾರೆ. ಈ ವೀಡಿಯೋವನ್ನು ಇದಾಗಲೇ ಲಕ್ಷಾಂತರ ಮಂದಿ ನೋಡಿದ್ದಾರೆ. ಸುಮಾರು ಏಳು ಸಾವಿರ ಕಮೆಂಟ್​ಗಳು ಇನ್​ಸ್ಟಾಗ್ರಾಂಗೆ ಬಂದಿವೆ.

ತಮಗೆ ಬರುವ ವಿವಿಧ ಬಗೆಯ ಅಡುಗೆಗಳನ್ನು ತಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜತೆಗೆ ಹಂಚಿಕೊಳ್ಳಬೇಕು ಎಂಬ ಕಾರಣಕ್ಕೆ ವೀಡಿಯೋ ಮಾಡಲು ಆರಂಭಿಸಿದ್ದರು ಕೊಬೆ ಅಮ್ಮ. ಫೆಬ್ರವರಿ ಕೊನೆಯಲ್ಲಿ ಇದನ್ನು ಆರಂಭಿಸಲಾಗಿತ್ತು. ಆರಂಭದಲ್ಲಿ 200 ಫಾಲೋವರ್ಸ್ ಮಾತ್ರ ಇದ್ದರು. ಆ ನಂತರ ಈ ಮಗುವಿನ ಮುದ್ದು ಮುಖ, ಅದರ ತೊದಲು ಮಾತಿಗೆ ಮನಸೋತಿರುವ ನೆಟ್ಟಿಗರು ಈ ಮಗುವಿನ ಬೆಂಬಲಿಗರಾಗತೊಡಗಿ ಇದೀಗ 13 ಲಕ್ಷ ದಾಟಿದೆ.