- ಇತ್ತೀಚಿನ ದಿನಗಳಲ್ಲಿ ಉಚಿತ ವೈಫೈ ಬಳಕೆ ಹೆಚ್ಚಾಗಿದೆ
- ಕೆಫೆ, ರೈಲು ನಿಲ್ದಾಣ, ಮಾಲ್, ಏರ್ಪೋರ್ಟ್ಗಳಲ್ಲಿ ಸಿಗುವ ಉಚಿತ ವೈ-ಫೈ ಬಳಕೆಗೆ ಜನರು ಮುಂದಾಗುತ್ತಿದ್ದಾರೆ
- ಯಾವುದೇ ಲಿಂಕ್ ಕ್ಲಿಕ್ ಮಾಡದಿದ್ರೂ, OTP ಇಲ್ಲದಿದ್ರೂ ಕ್ಷಣಮಾತ್ರದಲ್ಲಿ ನಿಮ್ಮ ಖಾಸಗಿ ಡಿಟೇಲ್ಗಳು ಲೀಕ್
- ಡೇಟಾ ಎನ್‌ಕ್ರಿಪ್ಶನ್ ಕೊರತೆಯು ಹ್ಯಾಕರ್‌ಗಳಿಗೆ ಸುಲಭ
ನವದೆಹಲಿ: ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಳ್ಳುವುದು, ಆಗಾಗ್ಗೆ ಮೊಬೈಲ್ ಫೋನ್ ನೋಡುವ ಅಭ್ಯಾಸ ಇಂದು ಹಲವರಿಗೆ ತೀರ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಇದು ಡಿಜಿಟಲ್ ಯುಗ ಅಂದಮೇಲೆ ಕೇಳಬೇಕೇ? ಸ್ಮಾರ್ಟ್ಫೋನ್ ಒಂದಿದ್ರೆ ಸಾಕು ಈ ಪ್ರಪಂಚವೇ ಬೇಡ. ರೀಲ್ಸ್, ವಿಡಿಯೋ ಎನ್ನುತ ಸಮಯ ಕಳೆಯುವವರ ಸಂಖ್ಯೆಯೇ ಹೆಚ್ಚು.
ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಬಸ್, ರೈಲು ಮತ್ತು ಫ್ಲೈಟ್ಗಳಿಗೆ ಕಾಯುವ ಅನೇಕರು, ಅಲ್ಲಿ ಸಿಗುವ ಉಚಿತ ವೈ-ಫೈಗೆ ಬೇಗ ಕನೆಕ್ಟ್ ಆಗ್ತಾರೆ. ಕಾರಣ, ಇದಕ್ಕೆ ಯಾವುದೇ ಇತಿ-ಮಿತಿ ಇಲ್ಲ ಎಂಬ ಕಾರಣ. ಕೆಲವರು ರೀಲ್ಸ್, ವಿಡಿಯೋ ನೋಡಲು ಬಳಸಿದರೆ, ಇನ್ನೂ ಕೆಲವರು ತಮ್ಮ ಇಮೇಲ್ ಕಳುಹಿಸುವಿಕೆ ಸೇರಿದಂತೆ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಲು ಬಳಕೆ ಮಾಡುತ್ತಾರೆ. ಆದರೆ, ಇದು ಭಾರೀ ಡೇಂಜರ್ ಎಂಬುದು ನಿಮಗೆ ನೆನಪಿರಲಿ.
ಫ್ರೀ ವೈಫೈ ಬಳಸುವುದರಿಂದ ನಿಮ್ಮ ವೈಯಕ್ತಿಕ ಡೇಟಾಗೆ ದೊಡ್ಡ ಬೆದರಿಕೆ ಎದುರಾಗುಬಹುದು. ನೀವು ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡದಿದ್ದರೂ, ಒಟಿಪಿ ಕೊಡದೇ ಹೋದ್ರೂ ಹ್ಯಾಕರ್ಗಳು ಬಹಳ ಸುಲಭವಾಗಿ ಹಾಗೂ ಕ್ಷಣಮಾತ್ರದಲ್ಲಿ ನಿಮ್ಮ ಖಾತೆಗಳನ್ನು ಹ್ಯಾಕ್ ಮಾಡಿಡುತ್ತಾರೆ. ಆಗ ನಿಮ್ಮ ಬ್ಯಾಂಕ್ ಅಕೌಂಟ್, ಫೋಟೋಸ್, ಪ್ರಮುಖ ದಾಖಲಾತಿ, ಪಾಸ್ವರ್ಡ್ಗಳ ಮೇಲಿನ ಸಂಪೂರ್ಣ ಹಿಡಿತ ಹ್ಯಾಕರ್ಗಳ ಕೈಯಲ್ಲಿರುತ್ತದೆ. ಇದು ನಿಮಗೆ ನೀವೇ ತಂದಿಟ್ಟುಕೊಳ್ಳುವ ದೊಡ್ಡ ದುರಂತ.
ಉಚಿತ ವೈ-ಫೈ ಬಳಕೆಗೂ ಮುನ್ನ ಮುನ್ನಚ್ಚೆರಿಕೆ ವಹಿಸಿ
VPN ಬಳಸಿ: ಇದು ನಿಮ್ಮ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುತ್ತದೆ. ನೆಟ್‌ವರ್ಕ್ ಅನ್ನು ಗಮನಿಸುವ ಯಾರಾದರೂ ನಿಮ್ಮ ಮಾಹಿತಿಯನ್ನು ಓದಲು ಹಾಗೂ ಕದಿಯಲು ಸಾಧ್ಯವಿಲ್ಲ.
HTTPS ವೆಬ್‌ಸೈಟ್‌ಗಳಿಗೆ ಮಾತ್ರ ಪ್ರಾಮುಖ್ಯತೆ
ನಿಮ್ಮ ಪಾಸ್‌ವರ್ಡ್‌ಗಳು ಮತ್ತು ವಿವರಗಳನ್ನು ಎಂಟ್ರಿ ಮಾಡುವ ಮೊದಲು, ವೆಬ್‌ಸೈಟ್ https:// ನಿಂದ ಆರಂಭವಾಗುತ್ತದೆಯೋ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಇದೀದ್ದರೆ ಮಾತ್ರ ಬಳಸಿಕೊಳ್ಳಿ.
2 ಸ್ಟೆಪ್ ವೆರಿಫಿಕೇಶನ್ ಆನ್ ಇರಲಿ
ಇಮೇಲ್, ಸೋಷಿಯಲ್ ಮೀಡಿಯಾ, ಬ್ಯಾಂಕಿಂಗ್ ಮತ್ತು ಯುಪಿಐ ಪೇಮೆಂಟ್ ಅಪ್ಲಿಕೇಶನ್‌ಗಳಿಗೆ ದೃಢೀಕರಣ ಕಡ್ಡಾಯ ಮಾಡಿಕೊಳ್ಳಿ. ಅಂದರೆ ಎರಡು ಹಂತದ ವೆರಿಫಿಕೇಶನ್ ಆನ್ ಮಾಡಿ. ಇದು ಆಗಾಗ್ಗೆ ನಿಮ್ಮ ಅನುಮತಿಯನ್ನು ಕೇಳುತ್ತಿರುತ್ತದೆ. ಇದರಿಂದ ನಿಮ್ಮ ಡೇಟಾಗೆ ಭದ್ರತೆ ಇರುತ್ತದೆ.
ಆಟೋ ಕನೆಕ್ಟ್ ಆಫ್ ಮಾಡಿ
ನಿಮ್ಮ ವೈಫೈ ಸೆಟ್ಟಿಂಗ್ಸ್ನಲ್ಲಿ ಆಟೋ ಕನೆಕ್ಟ್ ಆಯ್ಕೆಯನ್ನು ಮೊದಲು ಆಫ್ ಮಾಡಿ. ಇದು ಸಿಕ್ಕ ಸಿಕ್ಕ ನೆಟ್‌ವರ್ಕ್‌ಗಳಿಗೆ ಆಟೋಮೆಟಿಕ್ ಆಗಿ ಕನೆಕ್ಟ್ ಆಗಿಬಿಡುತ್ತದೆ.
ಇದಕ್ಕೆಲ್ಲ ಮೊಬೈಲ್ ಡೇಟಾ ಬಳಸಿ
ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ಸ್ ಮತ್ತು ಆಫೀಸ್ ಐಡಿ ಲಾಗಿನ್ ಸೇರಿದಂತೆ ಒಂದಷ್ಟು ನಿಮ್ಮ ವೈಯಕ್ತಿಕ ಕೆಲಸಗಳಿಗೆ ಮೊಬೈಲ್ ಡೇಟಾ ಆನ್ ಮಾಡಿಕೊಳ್ಳುವುದು ಹೆಚ್ಚು ಸುರಕ್ಷಿತ,(ಏಜೆನ್ಸೀಸ್).