ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿಯಲ್ಲಿ ನೂತನ ಸಂಜೀವಿನಿ ಕಾರ್ಯಾಗಾರ ಘಟಕವನ್ನು ಬೆಟ್ಟದಹಳ್ಳಿ ಗವಿಮಠಧ್ಯಕ್ಷ ಶ್ರೀ ಚಂದ್ರಶೇಖರಸ್ವಾಮೀಜಿ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಪಿ.ಎಸ್.ಶಶಿಕಲಾ ಯೋಗೀಶ್, ಉಪಾಧ್ಯಕ್ಷ ಎಂ.ಆರ್.ದಿಲೀಪ್ ಕುಮಾರು, ಸದಸ್ಯರಾದ ಎಂ.ಎನ್. ಭೀಮಶೆಟ್ಟಿ, ಸಿದ್ದಗಂಗಮ್ಮ ಕಲ್ಲೇಶ್, ರವೀಶ್, ಉಮಾ, ಶೈಲಜಾ, ಸಿದ್ದರಾಮಯ್ಯ, ನರಸಯ್ಯ, ಲೋಕೇಶ್, ಕಾಂತರಾಜು, ಶಿವಮೂರ್ತಿ, ಸಿದ್ದಗಂಗಯ್ಯ,ಯಶೋಧಾ, ರುಕ್ಮಿಣಿ, ಭವ್ಯಾ, ಕವಿತಾ, ದಿವ್ಯಾ, ಭಾಗ್ಯಾ, ಪಿಡಿಒ ಕೃಷ್ಣಮೂರ್ತಿ ಇದ್ದರು. 
ನ್ಯೂಸ್

ಬಡವರ ಬದುಕು ಅರಿತು ಆಳಲಿ: ಬೆಟ್ಟದಹಳ್ಳಿ ಶ್ರೀಚಂದ್ರಶೇಖರ ಸ್ವಾಮೀಜಿ ಹೇಳಿಕೆ

ಎಂ ಎನ್ ಕೋಟೆ: ನಮ್ಮ ದೇಶ ಹಂತ ಹಂತವಾಗಿ ಕುಸಿಯುತ್ತಿದೆ. ಶೇ.40 ಮಂದಿಯ ಸ್ವಾರ್ಥಕ್ಕೆ ಸಮಾಜ ಅಧೋಗತಿಯತ್ತ ಸಾಗಿದೆ. ಈ ನಿಟ್ಟಿನಲ್ಲಿ ಶ್ರೀಸಾಮಾನ್ಯ, ಬಡವರು, ದೀನರ ಬದುಕು ಅರ್ಥೈಸಿಕೊಂಡವರಿಗೆ ಅಧಿಕಾರ ನೀಡಬೇಕು ಎಂದು ಬೆಟ್ಟದಹಳ್ಳಿ ಗವಿ ಮಠಾಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.

ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಆಯೋಜಿಸಿದ್ದ ನೂತನ ಸಂಜೀವಿನಿ ಕಾರ್ಯಾಗಾರ ಘಟಕ, ಘನತ್ಯಾಜ್ಯ ವಿಲೇವಾರಿ ಘಟಕ, ಗಣಕೀಕೃತ ಗ್ರಂಥಾಲಯ ಹಾಗೂ ಶಾಲಾ ಕಾಂಪೌಂಡ್‌ಗಳ ಉದ್ಘಾಟನಾ ಸಮಾರಂಭದ ವೇದಿಕೆಗೆ ಚಾಲನೆ ನೀಡಿ ಮಾತನಾಡಿದರು.

ಶೇ.20 ಸ್ವಾರ್ಥಿಗಳು ದೇಶದ ಸಂಪತ್ತನ್ನು ವಿದೇಶದಲ್ಲಿಟ್ಟು ಮಾಯವಾಗಿದ್ದಾರೆ. ಶೇ.40 ಮಂದಿ ಜೀವನ ನಡೆಸಲು ಪರದಾಡುತ್ತಿದ್ದಾರೆ.

ಇಂಥವರ ಬದುಕು ಕಟ್ಟಿಕೊಡುವ ಕೆಲಸ ಮಾಡುವ ಸಮರ್ಥ ನಾಯಕರನ್ನು ಆಯ್ಕೆ ಮಾಡಿ ಎಂದರು.

ಗ್ರಾಪಂ ಸ್ಥಳೀಯ ಸರ್ಕಾರ ಎನಿಸಿಕೊಂಡಿರುವ ಗ್ರಾಮ ಸೌಧಕ್ಕೆ ತನ್ನದೇ ಸ್ವತಂತ್ರ ಅಧಿಕಾರವಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿಗೆ ಚುನಾಯಿತ ಸದಸ್ಯರು ಒಗ್ಗೂಡಿ ಕೆಲಸ ಮಾಡಬೇಕು. ಸರ್ಕಾರದ ಸವಲತ್ತು ಅರ್ಹರಿಗೆ ನೀಡುವ

ಮೂಲಕ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದರು.

ಬಿಜೆಪಿ ಮುಖಂಡ ಜಿ.ಎನ್.ಬೆಟ್ಟಸ್ವಾಮಿ ಮಾತನಾಡಿ, ಅಧಿಕಾರ ಗದ್ದುಗೆಗೆ ಕಿತ್ತಾಟ ಬಿಟ್ಟು ಒಗ್ಗೂಡಿ ಜನಪರ ಕೆಲಸ ಮಾಡಿ ಎಂ.ಎನ್.ಕೋಟೆ ಮಾದರಿಯಾಗಿದೆ ಎಂದರು. ತಾಪಂ ಇಒವಿ.ಪರಮೇಶ್ ಕುಮಾರ್ ಮಾತನಾಡಿ, ಗ್ರಾಮ ಸೌಧ ಸೇರಿ ಇವತ್ತಿನ ಅಭಿವೃದ್ದಿ ಕೆಲಸಗಳು ನರೇಗಾ ಯೋಜನೆಯಲ್ಲಿ ನಡೆದಿರುವುದು ಸ್ವಾಗತಾರ್ಹ. ಕಟ್ಟಡ ನಿರ್ಮಾಣಕ್ಕಿಂತ ನಿರ್ವಹಣೆ ಮುಖ್ಯ. ಸಾರ್ವಜನಿಕರ ಬಳಕೆಗೆ ಬರುವಂತೆ ಕೆಲಸ ಮಾಡಬೇಕು.

ಜನೋಪಯೋಗಿ ಕೆಲಸದತ್ತ ಸಿಬ್ಬಂದಿಗಳು ನಿಗಾವಹಿಸಿ ಎಂದು ಸಲಹೆ ನೀಡಿದರು.

ಸಂಸದ ಜಿ ಎಸ್.ಬಸವರಾಜು ಪಂಚಾಯಿತಿ ಕೆಲಸಗಳಿಗೆ ಶುಭ ಕೋರಿದರು.

ಬಿಜೆಪಿ ಮುಖಂಡರಾದ ಎನ್.ಸಿ.ಪ್ರಕಾಶ್, ಎಸ್.ಡಿ.ದಿಲೀಪ್ ಕುಮಾರ್, ಪಿ.ಬಿ.ಚಂದ್ರಶೇಖರ ಬಾಬು, ಹಾರನಹಳ್ಳಿ ಪ್ರಭಣ್ಣ ಇದ್ದರು.

ಸ್ಥಳೀಯ ಜನರ ಜೀವನಕ್ಕೆ ಹತ್ತಿರವಾದ ಗ್ರಾಮ ಪಂಚಾಯಿತಿಗೆ ಗ್ರಾಮ ಸರ್ಕಾರ ಎಂದು ನಾಮಕರಣ ಮಾಡಬೇಕು. ಜನರ ಸಂಪರ್ಕಕ್ಕೆ ಬರುವ ಸದಸ್ಯರು ನಿಜವಾದ ಜನ ನಾಯಕರಾಗಿದ್ದು, ಮಹಿಳೆಯರಿಗೂ ಅಧಿಕಾರ ನೀಡಿದ ಪಂಚಾಯಿತಿ ವ್ಯವಸ್ಥೆಯಲ್ಲಿ ಲೆಕ್ಕಾಚಾರವಿದೆ. ಇಂತಹ ವ್ಯವಸ್ಥೆಗೆ ಜನರ ಭಾಗವಹಿಸುವಿಕೆ ಮುಖ್ಯ. | ಕಾಡಶೆಟ್ಟಿಹಳ್ಳಿ, ಸತೀಶ್ ಗ್ರಾಪಂ ಸದಸ್ಯರ ಒಕ್ಕೂಟದ ಅಧ್ಯಕ್ಷ