ಶಿರಾಳಕೊಪ್ಪಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಡಿ.ಮಂಜುನಾಥ್, ರಘು, ಮಮತಾ ನಿಂಗಪ್ಪ, ಮುದಸೀರ್ ಇತರರಿದ್ದರು. 
ನ್ಯೂಸ್

ಕನ್ನಡ ಭಾಷೆಯ ಮಹತ್ವ ಅರಿಯಿರಿ

ಸೋಮಶೇಖರ ಎನ್

ಶಿರಾಳಕೊಪ್ಪ: ಕನ್ನಡ ಜ್ಯೋತಿ ರಥಕ್ಕೆ ಪಟ್ಟಣದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಕನ್ನಡ ದೇಶದ ಪ್ರಾಚೀನ ಭಾಷೆ. ಕನ್ನಡ ಭಾಷೆಗಿರುವ ಮಹತ್ವವನ್ನು ಅರಿತುಕೊಳ್ಳಬೇಕು. ಸಮ್ಮೇಳನದ ಮೂಲಕ ಜಾಗೃತಿ ಮೂಡಿಸಲು ರಥಯಾತ್ರೆ ನಡೆಯುತ್ತಿದ್ದು, ಡಿಸೆಂಬರ್‌ನಲ್ಲಿ ಸಮ್ಮೇಳನ ನಡೆಯಲಿದೆ ಎಂದು ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷ ರಘು ಮಾತನಾಡಿ, ಕನ್ನಡ ಭಾಷೆಯ ಇತಿಹಾಸದ ಬಗ್ಗೆ ಅರಿವು ಮೂಡಿಸಲು ರಥಯಾತ್ರೆ ಸಹಕಾರಿ ಆಗಲಿದೆ. ನಾವು ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡ ಬೆಳೆಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು, ಜನರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಕಸಾಪ ಸದಸ್ಯರು ರಥಯಾತ್ರೆಯನ್ನು ಬರಮಾಡಿಕೊಂಡರು. ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಕಸಾಪ ಶಿರಾಳಕೊಪ್ಪ ಘಟಕದ ಅಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಪ್ರಶಾಂತ್ ಕುಬಸದ್ ಸ್ವಾಗತಿಸಿದರು.

ಪುರಸಭೆ ಉಪಾಧ್ಯಕ್ಷ ಮುದಸೀರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್, ಮುಖ್ಯಾಧಿಕಾರಿ ಹೇಮಂತ್ ಡೊಳ್ಳೆ, ಸದಸ್ಯ ರಾಘವೇಂದ್ರ, ಪತ್ರಕತರ್ರ ಸಂಘದ ಜಿಲ್ಲಾ ಉಪಾಧ್ಯಕ್ಷ ಹುಚ್ರಾಯಪ್ಪ, ಸುರಹೊನ್ನೆ ಚಂದ್ರಶೇಖರ, ಅಕ್ಕಮಹಾದೇವಿ ಪ್ರತಿಷ್ಠಾನ ಅಧ್ಯಕ್ಷೆ ರೂಪಾ ಹಾಲೇಶ್, ಪ್ರಮುಖರಾದ ಜ್ಯೋತಿ ರಮೇಶ್, ಈರಣ್ಣ ಪ್ಯಾಟಿ, ಶಿವಾನಂದ ಸ್ವಾಮಿ, ಸಂತೋಷ್, ಡಾ. ಗಂಗಾಧರ್ ಇತರರಿದ್ದರು.