ಬೆಂಗಳೂರು:
ದೆಹಲಿಯಲ್ಲಿ ಯಶಸ್ವಿ ಹೆಜ್ಜೆ ಇಟ್ಟಿರುವ ಕೆಎಂಎ್ ತನ್ನ ನಂದಿನಿ ಬ್ರಾಂಡ್ ಉತ್ಪನ್ನಗಳ ಜೊತೆಗೆ ರಾಜಸ್ಥಾನಕ್ಕೂ ಲಗ್ಗೆ ಇಡಲು ಮುಂದಾಗಿದೆ.
ಈಗಾಗಲೇ ರಾಜಸ್ಥಾನದಲ್ಲಿ ಕೆಎಂಎ್ ಹಾಲು ಉತ್ಪನ್ನಗಳನ್ನು ಮಾರಾಟ ಮಾಡಲು ಒಂದು ಹಂತದ ಸರ್ವೆ ಮಾಡಲಾಗಿದ್ದು, ಮಾರುಕಟ್ಟೆಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೊದಲು ಜೈಪುರದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಲಾಗುವುದು. ಬಳಿಕ ಭೋಪಾಲ್, ಇಂಡೋರ್‌ನಲ್ಲಿಯೂ ನಂದಿನಿ ಹಾಲು ಮಾರಾಟ ಮಾಡಲು ಕೆಎಂಎ್ ಯೋಜಿಸಿದೆ. ರಾಜಸ್ಥಾನಕ್ಕೆ ಶಿವಮೊಗ್ಗ ಹಾಲು ಒಕ್ಕೂಟದಿಂದ ಹಾಲು ಕಳುಹಿಸಲು ಚರ್ಚೆ ಮಾಡಲಾಗಿದೆ.
ದೆಹಲಿ ಮಾರುಕಟ್ಟೆಯಲ್ಲಿ ಈಗಾಗಲೇ 15 ಸಾವಿರ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಮುಂದಿನ ಹಂತದಲ್ಲಿ ಉತ್ತರ ಪ್ರದೇಶದ ನೋಯಿಡಾ ಸೇರಿದಂತೆ ಹಲವು ಪ್ರದೇಶದಲ್ಲಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ನಂದಿನಿ ಬ್ರಾಂಡ್ ಹಾಲು ಮಾರಾಟ ಮಾಡಲು ಈ ಮೊದಲು ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ಅದೆಲ್ಲವನ್ನೂ ಹಿಮ್ಮೆಟ್ಟಿಸಿ ನಂದಿನಿ ಹಾಲು ಮಾರಾಟ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಲಾಗಿದೆ. ಶೀಘ್ರದಲ್ಲಿಯೇ ಮಾರಾಟ ಪ್ರಮಾಣ 25 ಸಾವಿರ ಲೀಟರ್ ದಾಟಲಿದೆ ಎನ್ನುವುದು ಅಧಿಕಾರಿಗಳಿ ವಿಶ್ವಾಸ.
ದೆಹಲಿಯ ಕರ್ನಾಟಕ ಭವನದಲ್ಲಿಯೂ ನಂದಿನಿ ಉತ್ಪನ್ನಗಳು ಮಾರಾಟ ಮಾಡಲು ಸ್ಥಳಾವಕಾಶವನ್ನು ಪಡೆಯಲಾಗಿದೆ. ಶೀಘ್ರದಲ್ಲಿಯೇ ಅಲ್ಲಿ ಕೆಎಂಎ್ ಪಾರ್ಲರ್ ಪ್ರಾರಂಭಿಸಲು ಉದ್ದೇಶಿಸಲಾಗಿದೆ.
*ದೆಹಲಿಯಲ್ಲಿ ಕೆಎಂಎ್ ಹಾಲು ಬೇಡಿಕೆ ಹೆಚ್ಚುತ್ತಿದ್ದು, ಈಗಾಗಲೇ ಮಾರಾಟ ಪ್ರಮಾಣ 15 ಸಾವಿರಕ್ಕೆ ಹೆಚ್ಚಿದೆ. ಹೊಸ ವರ್ಷದಲ್ಲಿ ರಾಜಸ್ಥಾನದಲ್ಲಿಯೂ ನಂದಿನಿ ಹಾಲು ಮಾರಾಟ ಮಾಡಲು ಉದ್ದೇಶಿಸಲಾಗಿದ್ದು, ಶೀಘ್ರವೇ ಅದಕ್ಕೆ ಚಾಲನೆ ನೀಡಲಾಗುವುದು.
-ಭೀಮಾನಾಯ್ಕ, ಅಧ್ಯಕ್ಷರು, ಕೆಎಂಎ್.