ನ್ಯೂಸ್

kmf ಹಾಲು 2 ರೂ ದುಬಾರಿ; ಅರ್ಧ ಲೀಟರ್, 1 ಲೀಟರ್ ಹಾಲಿನ ಪ್ಯಾಕೆಟ್ ಗೆ 50 ಎಂಎಲ್ ಹಾಲು ನೀಡಲು ಕ್ರಮ

Bengaluru - Political - Shivananda Tagadur

ಬೆಂಗಳೂರು:
ಕೆಎಂಎ್ಗೆ ಬರುತ್ತಿರುವ ಹಾಲಿನ ಪ್ರಮಾಣ ಗಣನೀಯವಾಗಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಪ್ರತಿ ಲೀಟರ್‌ಗೆ 50 ಎಂಎಲ್ ಹಾಲು ಹೆಚ್ಚುವರಿಯಾಗಿ ನೀಡಲು ನಿರ್ಧರಿಸಿದ್ದು, 2 ರೂ ಬೆಲೆ ಏರಿಕೆ ಮಾಡಲಾಗಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ.
ಅರ್ಧ ಲೀಟರ್ (500ಎಂಎಲ್) ಹಾಲಿನ ಪ್ಯಾಕೆಟ್ ಬದಲಿಗೆ 550 ಪ್ಯಾಕೆಟ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಒಂದು ಲೀಟರ್ (1000 ಎಂಎಲ್)ಹಾಲಿನ ಪ್ಯಾಕೆಟ್ ಬದಲಿಗೆ 1050 ಎಂಎಲ್ ಹಾಲಿನ ಪ್ಯಾಕೆಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ.
2 ರೂ ಏರಿಕೆ ಆಗಿರುವುದರಿಂದ ಇನ್ನುಮುಂದೆ ಅರ್ಧ ಲೀಟರ್ ಹಾಲಿನ ಬೆಲೆ 22 ರಿಂದ 24 ರೂಗೆ, ಒಂದು ಲೀಟರ್ ಹಾಲಿನ ಬೆಲೆ 42 ರಿಂದ 44 ರೂಗೆ ಏರಿಕೆ ಆಗಿದೆ.

4 ಲಕ್ಷ ಲೀಟರ್ ಮಾರಾಟ
50 ಎಂಎಲ್ ಹಾಲಿನ ಬೆಲೆ ಹೆಚ್ಚಳ ಮಾಡಿರುವುದರಿಂದ ಈಗಾಗಲೇ ಮಾರಾಟವಾಗುತ್ತಿರುವ ಹಾಲಿನ ಜೊತೆಗೆ ಹೆಚ್ಚುವರಿಯಾಗಿ 3.50 ಲಕ್ಷ ಲೀಟರ್‌ನಿಂದ 4 ಲಕ್ಷ ಲೀಟರ್ ಹಾಲು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಹೆಚ್ಚುವರಿ ಹಾಲನ್ನು ಪೌಡರ್ ಮಾಡಿ ಶೇಖರಿಸಿಟ್ಟುಕೊಂಡು ಮಾರಾಟ ಮಾಡಬೇಕಾದ ಅನಿವಾರ್ಯತೆ ಒತ್ತಡದಲ್ಲಿದ್ದ ಕೆಎಂಎ್ಗೆ ಸ್ವಲ್ಪ ಮಟ್ಟಿಗೆ ಭಾರ ಕಡಿಮೆಯಾಗಲಿದೆ.

1 ಕೋಟಿ ಲೀಟರ್‌ನತ್ತ ಸಂಗ್ರಹ
ಕೆಎಂಎ್ಗೆ ಬರುತ್ತಿರುವ ಹಾಲಿನ ಸಂಗ್ರಹ 90 ಲಕ್ಷ ಲೀಟರ್ ಆಜುಬಾಜಿನಲ್ಲಿತ್ತು. ಈ ತನಕ 94 ಲಕ್ಷ ಲೀಟರ್ ಹಾಲು ಬಂದಿದ್ದು ಗರಿಷ್ಠ ಸಂಗ್ರಹವಾಗಿತ್ತು. ರಾಜ್ಯದಲ್ಲಿ ಉತ್ತಮ ಮಳೆಯಾದ ಬೆನ್ನಲ್ಲಿಯೇ ಜಾನುವಾರುಗಳಿಗೆ ಹಸಿರು ಮೇವು ಲಭಿಸಿದ್ದರಿಂದ ಹಾಲಿನ ಇಳುವರಿ ಗಣನೀಯವಾಗಿ ಏರಿಕೆ ಆಗಿದ್ದು, ನಿತ್ಯದ ಸಂಗ್ರಹ 99 ಲಕ್ಷ ಲೀಟರ್‌ಗೆ ಮುಟ್ಟಿದೆ. ಯಾವುದೇ ಕ್ಷಣದಲ್ಲಿ ಕೆಎಂಎ್ ಹಾಲು ಸಂಗ್ರಹ 1 ಕೋಟಿ ಲೀಟರ್ ದಾಟಿ ದಾಖಲೆ ಬರೆಯುವ ನಿರೀಕ್ಷೆ ಇದೆ.

ಲಾಭ-ನಷ್ಟದ ಮಾತಿಲ್ಲ
ಹೆಚ್ಚುವರಿಯಾಗಿ ಹಾಲು ಬರುತ್ತಿರುವುದರಿಂದ ಉಳಿಕೆ ಹಾಲನ್ನು ಪುಡಿ ಮಾಡಲು ನಾನಾ ಘಟಕಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಆದರೂ ಇನ್ನೂ ಮೂರ‌್ನಾಲ್ಕು ಲಕ್ಷ ಲೀಟರ್ ಹಾಲು ಉಳಿಕೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಗ್ರಾಹಕರಿಗೆ ಈ ಲಾಭವನ್ನು ನೀಡಲು ಕೆಎಂಎ್ ಮುಂದಾಗಿದೆ. 50 ಎಂಎಲ್‌ಗೆ ಸರಾಸರಿ 2 ರೂ ಖರ್ಚು ಬರುವುದರಿಂದ ಪ್ರತಿ ಲೀಟರ್‌ಗೆ 2 ರೂ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ಲಾಭ ನಷ್ಟದ ಬಗ್ಗೆ ಲೆಕ್ಕ ಹಾಕದೆ, ಇದು ಹಾಲು ಉತ್ಪಾದಕರ ಸಂಸ್ಥೆ ಆಗಿರುವುದರಿಂದ ಅದರ ಲಾಭವನ್ನು ಗ್ರಾಹಕರಿಗೆ ಮತ್ತು ಹಾಲು ಉತ್ಪಾದಕರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಕೆಎಂಎ್ ಸ್ಪಷ್ಟಪಡಿಸಿದೆ.

ಕೆಎಂಎ್ ಸಮರ್ಥನೆ
ರಾಜ್ಯದಲ್ಲಿ ಪ್ರತಿ ಲೀಟರ್ ಹಾಳಿನ ಬೆಲೆ 44ರೂ ಇದ್ದರೆ, ಕೇರಳದಲ್ಲಿ 52 ರೂ, ದೆಹಲಿಯಲ್ಲಿ 54 ರೂ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ 56, ಆಂಧ್ರ ಪ್ರದೇಶದಲ್ಲಿ 58 ರೂ ಇದೆ. ಈ ಎಲ್ಲಾ ರಾಜ್ಯಗಳಿಗೆ ಹೋಲಿಕೆ ಮಾಡಿದರೂ, ರಾಜ್ಯದಲ್ಲಿ ಹಾಲಿನ ದರ ಕಡಿಮೆಯೇ ಇದೆ ಎಂದು ಕೆಎಂಎ್ ಸಮರ್ಥನೆ ನೀಡಿದೆ.

*ಹಾಲಿನ ದರವನ್ನು ಏರಿಕೆ ಮಾಡಿಲ್ಲ. ಕೆಎಂಎ್ಗೆ ಬರುತ್ತಿರುವ ಹಾಲಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರತಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ಹಾಲಿನ ಪ್ಯಾಕೆಟ್‌ನಲ್ಲಿ 50 ಎಂಎಲ್ ಹಾಲು ಹೆಚ್ಚುವರಿಯಾಗಿ ನೀಡಿ ತಲಾ 2 ರೂ ಎರಿಕೆ ಮಾಡಲಾಗಿದೆ.
-ಜಗದೀಶ್, ವ್ಯವಸ್ಥಾಪಕ ನಿರ್ದೇಶಕ, ಕೆಎಂಎ್