ನ್ಯೂಸ್

ಹಾಲಿನ ದರ ಏರಿಕೆಗೆ ಸಿಗದ ಸಿಎಂ ಸಮ್ಮತಿ

Bengaluru - Political - Shivananda Tagadur

ಬೆಂಗಳೂರು:
ಹಾಲಿನ ದರ ಏರಿಕೆ ಮಾಡುವುದು ಇನ್ನಷ್ಟು ವಿಳಂಬವಾಗಲಿದೆ. ದರ ಏರಿಕೆ ಬಗ್ಗೆ ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಯಾವುದೇ ಸೂಚನೆಗಳು ಕೆಎಂಎ್ಗೆ ಹೋಗಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರತಿ ಲೀಟರ್‌ಗೆ 5 ರೂ ಏರಿಕೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ತೆರೆ ಮರೆಯ ಪ್ರಯತ್ನಗಳು ನಡೆಯುತ್ತಿದ್ದು, ಅದನ್ನು ಮಾಗಡಿಯಲ್ಲಿ ನಡೆದ ಸಭೆಯಲ್ಲಿ ಸಹಕಾರ ಸಿಚವ ಕೆ.ಎನ್.ರಾಜಣ್ಣ ಬಹಿರಂಗವಾಗಿಯೇ ಪ್ರಸ್ತಾಪ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ದರ ಏರಿಕೆ ಬಗ್ಗೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲು ಕೆಎಂಎ್ ಮುಂದಾಗಿತ್ತು. ಆದರೆ, ಸಿಎಂ ಇದಕ್ಕೆ ಒಲವು ತೋರಿಸಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.
ಹಾಲಿನ ದರ ಏರಿಕೆ ಮಾಡುವುದಕ್ಕೆ ಆತುರ ತೋರುವುದು ಬೇಡ. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಲೀಟರ್ ಗೆ 3 ರೂ ಏರಿಕೆ ಮಾಡಿದ್ದೇವೆ. ಮತ್ತೆ 5 ರೂ ಏರಿಕೆ ಮಾಡುವುದಾದರೆ, ಅದು ಗ್ರಾಹಕರಿಗೆ ದೊಡ್ಡ ಹೊರೆಯಾಗಬಹುದು ಎಂಬ ಅಭಿಪ್ರಾಯವನ್ನು ಸಿಎಂ ವ್ಯಕ್ತಪಡಿಸಿದ್ದು, ಆಡಳಿತಾತ್ಮಕ ವೆಚ್ಚವನ್ನು ಕಡಿಮೆ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ಕೆಎಂಎ್ ಅಧಿಕಾರಿಗಳು ತಿಳಿಸಿದ್ದಾರೆ.
ಹಾಲು ಸಂಗ್ರಹದಲ್ಲಿ 1 ಕೋಟಿ ಲೀಟರ್ ದಾಟಿ ದಾಖಲೆ ಮಾಡಿರುವ ಕೆಎಂಎ್, ಹಲವು ರಾಜ್ಯಗಳಿಗೆ ಹೋಲಿಸಿದರೆ, ಈಗಲೂ ಕಡಿಮೆ ದರದಲ್ಲಿ ಹಾಲು ಮಾರಾಟ ಮಾಡುತ್ತಿದೆ. ಆದ್ದರಿಂದ ದರ ಏರಿಕೆ ಮಾಡುವುದು ತಪ್ಪಲ್ಲ. ಏರಿಕೆ ಮಾಡುವ ದರವನ್ನು ನೇರವಾಗಿ ಹಾಲು ಉತ್ಪಾದಕರಿಗೆ ನೀಡಬೇಕು ಎನ್ನುವ ಅಭಿಪ್ರಾಯಗಳನ್ನು ಹಲವರು ವ್ಯಕ್ತಪಡಿಸಿದ್ದಾರೆ.
ದಿಢೀರ್ ದರ ಏರಿಕೆ ಮಾಡಿದರೆ, ಅದು ಕೆಎಂಎ್ಗೆ ದುಬಾರಿ ಆಗಬಹುದು. ಈಗಾಗಲೇ ಮಾರುಕಟ್ಟೆಯಲ್ಲಿ ಖಾಸಗಿ ಹಾಲುಉತ್ಪಾದಕರು ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಸಾಧಕ ಮತ್ತು ಬಾಧಕಗಳ ಬಗ್ಗೆ ಪಕ್ಕಾ ಲೆಕ್ಕಾಚಾರ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಮೊದಲು ಮಾಹಿತಿ ನೀಡುವಂತೆ ಸಿಎಂ ಸೂಚಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

*ಹಾಲಿನ ದರ ಏರಿಕೆ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ನಾವುಈ ತನಕ ಮುಖ್ಯಮಂತ್ರಿಗಳಿಗೆ ಏರಿಕೆ ಕುರಿತಾಗಿ ಯಾವುದೇ ಪ್ರಸ್ತಾವನೆಗಳನ್ನು ಕಳುಹಿಸಿಲ್ಲ. ಸಿಎಂ ಕಚೇರಿಯಿಂದಲೂ ಈ ಬಗ್ಗೆ ನಮಗೆ ಯಾವ ಮಾಹಿತಿ ಬಂದಿಲ್ಲ.
-ಜಗದೀಶ್, ಎಂಡಿ, ಕೆಎಂಎ್.