ನ್ಯೂಸ್

ಎನ್​ಎಸ್​ಎಸ್​ ಶಿಬಿರದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಿ; ನಾಗಪ್ಪ ಗುಡಿಯವರ

ರಾಣೆಬೆನ್ನೂರ: ವಿದ್ಯಾಥಿರ್ಗಳು ಶಾಲಾ&ಕಾಲೇಜ್​ ಹಂತದಲ್ಲಿ ನಡೆಯುವ ಎನ್​ಎಸ್​ಎಸ್​ ಶಿಬಿರದಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಾಮಾನ್ಯಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ನಾಗಪ್ಪ ಗುಡಿಯವರ ಹೇಳಿದರು.
ಸ್ಥಳಿಯ ಕೆ.ಎಲ್​.ಇ. ಸಂಸ್ಥೆಯ ರಾಜ&ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಎನ್​ಎಸ್​ಎಸ್​ ಟಕದ ವತಿಯಿಂದ ತಾಲೂಕಿನ ಮಾಗೋಡ ಗ್ರಾಮದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಎನ್​ಎಸ್​ಎಸ್​ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್​ಡಿಎಂಸಿ ಅಧ್ಯಕ್ಷ ಗಿರೀಶ ಮುದಿಗೌಡ್ರ, ಮಹಾವಿದ್ಯಾಲಯದ ಪ್ರಾಚಾರ್ಯ ನಾರಾಯಣ ನಾಯಕ, ಗ್ರಾಪಂ ಸದಸ್ಯೆ ರಾಜೇಶ್ವರಿ ಮುದಕನಗೌಡ್ರ, ಅನುರಾಧ ಎಸ್​., ಎಂ.ಎನ್​. ಸೂರಣಗಿ, ನಾಗರಾಜ ಗವಿಯಪ್ಪನವರ, ಸಾಯಿಲತಾ ಮಡಿವಾಳರ, ವೀರೇಶ ಕುರಹಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾಶ್ರೀ ದಾಮೋದರ ಪ್ರಾಥಿರ್ಸಿದರು. ಸುಜಾತ ಹುಲ್ಲೂರ ಸ್ವಾಗತಿಸಿದರು. ಕೃಷ್ಣ ಎಲ್​.ಎಚ್​. ನಿರೂಪಿಸಿದರು. ಡಾ. ಕವಿತಾ ಗಡ್ಡದಗೂಳಿ ವಂದಿಸಿದರು.