ನ್ಯೂಸ್

ಕೆಎಲ್‌ಇ ಪಾಲಿಟೆಕ್ನಿಕ್ ಕಾಲೇಜ್‌ನ ಫಲಿಂತಾಶ ಶೇ. 100ರಷ್ಟು

Haveri - Kariyappa Aralikatti

ಹಾವೇರಿ: ನಗರದ ಕೆಎಲ್‌ಇ ಸಂಸ್ಥೆಯ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜ್‌ನ 2023-24ನೇ ಸಾಲಿನ ಅಂತಿಮ ವರ್ಷದ ಡಿಪ್ಲೋಮಾ ಪರೀಕ್ಷೆಯ ಫಲಿತಾಂಶ ಶೇ. 100ರಷ್ಟಾಗಿದೆ.
ಪರೀಕ್ಷೆಗೆ ಹಾಜರಾದ 116 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ಕಂಪ್ಯೂಟರ್ ಸಾಯಿನ್ಸ್ ವಿಭಾಗದಲ್ಲಿ ವಿದ್ಯಾರ್ಥಿ ಸಂದೀಪ ಶಿವಶೆಟ್ಟರ್ ಶೇ. 99.25ರಷ್ಟು ಅಂಕಗಳಿಸಿ ಪ್ರಥಮ, ಇಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಗುಡದೇಶ್ವರ ಅಂಬಿಗೇರ ಶೇ. 97.5ರಷ್ಟು ಅಂಕಗಳಿಸಿ ಪ್ರಥಮ, ಮೆಕ್ಯಾನಿಕಲ್ ವಿಭಾಗದಲ್ಲಿ ರಕ್ಷಿತ್ ಗಾಣಿಗೇರ ಶೇ. 95.25ರಷ್ಟು ಅಂಕಗಳಿಸಿ ಪ್ರಥಮ, ಸಿವಿಲ್ ವಿಭಾಗದ ಗುರು ಗೊಂಡಿ ಶೇ. 93.75ರಷ್ಟು ಅಂಕಗಳಿಸಿ ಪ್ರಥಮ, ಎಲೆಕ್ಷಾನಿಕ್ಸ್ ಕಮ್ಯೂನಿಕೇಶನ ವಿಭಾಗದಲ್ಲಿ ರಕ್ಷಿತಾ ಪಾಟೀಲ ಶೇ. 92.20ರಷ್ಟು ಅಂಕಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕಾಲೇಜ್‌ನ ಪ್ರಾಚಾರ್ಯ ಪ್ರೊ. ಪ್ರದೀಪ ಗಡ್ಡಿಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.