ರಾಣೆಬೆನ್ನೂರ: ನಗರದ ಕೆ.ಎಲ್.ಇ. ಸಂಸ್ಥೆಯ ರಾಜರಾಜೇಶ್ವರಿ ಅಂಗಸಂಸ್ಥೆಗಳು ಮತ್ತು ಕೆ.ಎ್. ಪಾಟೀಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬುಧವಾರ ದಿ. ಕೆ.ಎ್. ಪಾಟೀಲ ಅವರ 29ನೇ ಪುಣ್ಯಸ್ಮರಣೆ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ವಿ.ಪಿ. ಲಿಂಗನಗೌಡ್ರ ಮಾತನಾಡಿ, ಕೆ.ಎ್. ಪಾಟೀಲರು ಶಿಕ್ಷಣಕ್ಕಾಗಿ ತಮ್ಮ ಜೀವನನ್ನು ಮುಡುಪಾಗಿಟ್ಟವರು. ಅಂಥವರ ತತ್ವ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಕೆ.ಎ್. ಪಾಟೀಲ ಚಾರಿಟೇಬಲ್ ಟ್ರಸ್ಟ್ನ ಜಂಟಿ ಕಾರ್ಯದಶಿರ್ ಆರ್.ಜಿ. ಹುಲಮನಿ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ವೀರಣ್ಣ ಅಂಗಡಿ, ಬಿ.ಎಸ್. ಪಟ್ಟಣಶೆಟ್ಟಿ, ಜಯಣ್ಣ ಜಂಬಿಗಿ, ವಿವಿಧ ವಿಭಾಗಗಳ ಮುಖ್ಯಸ್ಥರಾದ ನಾರಾಯಣ ನಾಯಕ, ಸುರೇಖಾ ಕಟ್ಟಿ, ಪ್ರಲ್ಲಾದ ಪಿ., ವಿದ್ಯಾ ನಾರಜ್ಜಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.