ರಾಣೆಬೆನ್ನೂರ: ಪರಿಸರದಲ್ಲಿ ಸಿಎಫ್ಸಿ ಅನಿಲದಿಂದ ಆಗುವ ಹಸಿರು ಮನೆಯ ಪರಿಣಾಮದಿಂದ ಓಝೊನ್ ಪದರು ನಾಶವಾಗುತ್ತದೆ. ಹೀಗೆಯೆ ಮುಂದುವರಿದರೆ ಜೀವ ಸಂಕುಲ ನಾಶವಾಗುತ್ತದೆ. ಆದ್ದರಿಂದ ಪರಿಸರ ಮಾಲಿನ್ಯ ತಡೆದು ಪರಿಸರವನ್ನು ಕಾಪಾಡುವುದರ ಜತೆಗೆ ಓಝೊನ್ ಪದರನ್ನು ಕಾಪಾಡಲು ನಾವೆಲ್ಲರೂ ಪ್ರಯತ್ನಿಸೋಣ ಎಂದು ಉಪನ್ಯಾಸಕ ನಾಗರಾಜ ಗವಿಯಪ್ಪನವರ ಹೇಳಿದರು.
ಸ್ಥಳಿಯ ಕೆಎಲ್ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಓಝೊನ್ ದಿನ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಲಯದ ಪ್ರಾಚಾರ್ಯ ನಾರಾಯಣ ನಾಯಕ ಮಾತನಾಡಿ, ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ಉತ್ತಮ ಪರಿಸರವನ್ನು ರೂಪಿಸುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ. ಹಾಗೂ ಪ್ರತಿಯೊಬ್ಬರು ಸಸ್ಯಗಳನ್ನು ಬೆಳೆಸಿ ಓಝೊನ್ ಪದರನ್ನು ರಕ್ಷಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ವಿದ್ಯಾಥಿರ್ ಒಕ್ಕೂಟದ ಕಾರ್ಯಾಧ್ಯಕ್ಷ ರೇಖಾ ಶಿಡೇನೂರ, ಎಂ.ಎನ್. ಸೂರಣಗಿ, ಚನ್ನಬಸಪ್ಪ ಮಾಳಿ, ಕೃಷ್ಣ ಎಲ್.ಎಚ್. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.