ಪಿರಿಯಾಪಟ್ಟಣದ ಕೆ.ಎಲ್.ಗೌರಿನಂದನ ಏಷ್ಯಾ ಬುಕ್ ಆಫ್ ರೆಕಾರ್ಡ್ ಗೆ ದಾಖಲಾಗುವ ಮೂಲಕ ಗ್ರ್ಯಾಂಡ್ ಮಾಸ್ಟರ್ ಎನಿಸಿದ್ದಾರೆ.
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ
ಪಿರಿಯಾಪಟ್ಟಣ: 13 ವರ್ಷ 9 ತಿಂಗಳ ವಯಸ್ಸಿನಲ್ಲಿ ಕಣ್ಣು ಮುಚ್ಚಿಕೊಂಡು 2*2 ಮಿರರ್ ಕ್ಯೂಬ್‌ಅನ್ನು 15 ಸೆಕೆಂಡ್‌ಗಳಲ್ಲಿ ಪರಿಹರಿಸಿದ ಪಟ್ಟಣದ ಕೆ.ಎಲ್.ಗೌರಿನಂದನ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ದಾಖಲಾಗುವ ಮೂಲಕ ಗ್ರ್ಯಾಂಡ್ ಮಾಸ್ಟರ್ ಎನಿಸಿದ್ದಾರೆ.
ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿಯಾಗಿರುವ ಕೂರನ ಲೋಕೇಶ್ ಮಧು ಮತ್ತು ಸಿಂಧು ದಂಪತಿ ಪುತ್ರ ಕೆ.ಎಲ್.ಗೌರಿನಂದನ ಮಡಿಕೇರಿ ಗಾಳಿಬೀಡುವಿನಲ್ಲಿರುವ ನವೋದಯ ವಿದ್ಯಾಸಂಸ್ಥೆಯಲ್ಲಿ 8ನೇ ತರಗತಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದು, 2025 ರ ಡಿಸೆಂಬರ್ 31 ರಂದು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಈ ಪ್ರದರ್ಶನವನ್ನು ಕಳುಹಿಸಿದ್ದರು. ಕೇವಲ 15 ಸೆಕೆಂಡ್‌ಗಳಲ್ಲಿ ಕಣ್ಣು ಮುಚ್ಚಿಕೊಂಡು 2*2 ಮಿರರ್ ಕ್ಯೂಬ್‌ಅನ್ನು ಪರಿಹರಿಸಿದ 13 ವರ್ಷ 9 ತಿಂಗಳ ವಯೋಮಾನದ ಕೆ.ಎಲ್.ಗೌರಿನಂದನನ ದಾಖಲಾತಿಗಳನ್ನು ಪರಿಶೀಲಿಸಿರುವ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ವಿಭಾಗವು ಇದೀಗ ಈ ಬಾಲಕನಿಗೆ ಗ್ರಾೃಂಡ್ ಮಾಸ್ಟರ್ ಪ್ರಶಸ್ತಿ ನೀಡಿ ಗೌರವಿಸಿದೆ.
ಬಾಲಕನ ಈ ಸಾಧನೆಗೆ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.