ನ್ಯೂಸ್

ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ, ಕೋರ್ಸ್ ಆಯ್ಕೆಗೆ ನಾಳೆ ಕೆಎಲ್​ಇ ವೆಬಿನಾರ್

lakshmihegde

ಹುಬ್ಬಳ್ಳಿ: ದ್ವಿತೀಯ ಪಿಯು ಪಾಸಾದ ವಿದ್ಯಾರ್ಥಿಗಳಿಗೆ ಮುಂದೆ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು, ವೃತ್ತಿ ಜೀವನದ ಕನಸು ನನಸು ಮಾಡಿಕೊಳ್ಳಲು ಯಾವ ಕೋರ್ಸ್ ಸೂಕ್ತ ಎಂಬ ವಿಷಯದಲ್ಲಿ ಗೊಂದಲಗಳು ಇರಬಹುದು.

ಸರಿಯಾದ ಮಾಹಿತಿ, ಮಾರ್ಗದರ್ಶನ ಸಿಕ್ಕರೆ ಗೊಂದಲ ಪರಿಹಾರವಾಗಿ, ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗುತ್ತದೆ. ಈ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ ಇಲ್ಲಿಯ ಕೆ.ಎಲ್.ಇ. ತಾಂತ್ರಿಕ ವಿಶ್ವ ವಿದ್ಯಾಲಯದ ವತಿಯಿಂದ ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ವೆಬಿನಾರ್ ಆಯೋಜಿಸಲಾಗಿದೆ. ಸೆ. 18ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆವರೆಗೆ ಝುೂಮ್ ಜಾಲತಾಣದ (ಆನ್​ಲೈನ್) ಮೂಲಕ ವೆಬಿನಾರ್ ನಡೆಯಲಿದೆ. ಇದನ್ನೂ ಓದಿ: ವಿಧಾನಸಭಾ ಅಧಿವೇಶನಕ್ಕೆ ಕಾಂಗ್ರೆಸ್ ಸಿದ್ಧತೆ; ಸರ್ಕಾರವನ್ನು ಕಟ್ಟಿಹಾಕಲು ಕೈ ಸನ್ನದ್ಧ

ಪಿಯುಸಿ ನಂತರದ ವಿವಿಧ ಶೈಕ್ಷಣಿಕ ಅವಕಾಶಗಳು ಹಾಗೂ ಇಂಜಿನಿಯರಿಂಗ್ ಶಿಕ್ಷಣದ ಆಯ್ಕೆ ಹೇಗೆ, ಏಕೆ? ಕುರಿತು ಕ್ರಮವಾಗಿ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಸ್.ವಿ. ದೇಸಾಯಿ ಮತ್ತು ಡಾ. ನಿತಿನ್ ಕುಲಕರ್ಣಿ ಮಾತನಾಡುವರು. ಕರೊನಾ ಸಂಕಷ್ಟದ ನಡುವೆ ಆನ್​ಲೈನ್ ವೇದಿಕೆ ಮೂಲಕ ಕಲಿಕೆಯ ಸವಾಲುಗಳನ್ನು ಮಾನಸಿಕ ಸಿದ್ಧತೆಯೊಂದಿಗೆ ನಿಭಾಯಿಸುವ ಬಗ್ಗೆ ಧಾರವಾಡದ ಮಾನಸಿಕ ಆರೋಗ್ಯ ಸಂಸ್ಥೆ (ಡಿಮ್ಹಾನ್ಸ್) ಪ್ರಾಧ್ಯಾಪಕ ಡಾ. ಆದಿತ್ಯ ಪಾಂಡುರಂಗಿ, ಆರೋಗ್ಯ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳ ಕುರಿತು ಧಾರವಾಡದ ಎಸ್. ಡಿ.ಎಂ. ವಿವಿ ತಜ್ಞ ವೈದ್ಯ ಡಾ.ಅಜಂತಾ ಜಿ.ಎಸ್. ಮಾತನಾಡುವರು. ಆಸಕ್ತರು https://bit.ly/3k7Pxjt #Webinar'#OnlineLearning, #Course #Career #Speakers, #CareerCounselling #Counselling, #KnowledgeSesion #Knowledge ಮೂಲಕ ಸಂಪರ್ಕಿಸಿ ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ಕೋರಲಾಗಿದೆ.