ನ್ಯೂಸ್

15ರ ಬಾಲಕನನ್ನು 17 ತುಂಡುಗಳಾಗಿ ಕತ್ತರಿಸಿ ಬಿಸಾಡಿದ ಕಿರಾತಕರು; ಕಾರಣ ಕೇಳಿದ್ರೆ ಶಾಕ್​​!

ಉತ್ತರಪ್ರದೇಶ: ಜಮೀನಲ್ಲಿ ಕೆಲಸ ಮಾಡುವಾಗ ಕೊಯ್ಲು ಯಂತ್ರಕ್ಕೆ ಸಿಲುಕಿ ಗಂಭೀರ ಗಾಯಗಳು ಆಗಿದ್ದ ಬಾಲಕನ್ನು ಎಳೆದೊಯ್ದ ಕಿರಾತಕರು 17 ತುಂಡುಗಾಳಗಿ ಕತ್ತರಿಸಿ ಅದೇ ಹೊಲ್ಲದಲ್ಲಿ ಹೂತಿರುವ ಘಟನೆ ಉತ್ತರಪ್ರದೇಶದ ಬಹ್ರೈಚ್​​ ಎನ್ನುವ ಪ್ರದೇಶದಲ್ಲಿ ಇತ್ತೀಚಿಗೆ ನಡೆದಿದ್ದು, ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ.

ಬಹ್ರೈಚ್​ನ ಗಾಯತ್ರಿ ನಗರ ನಿವಾಸಿ ವಿಕ್ರಮ್​ (15) ನಾಪತ್ತೆಯಾದ ಬಾಲಕ ಎಂದು ಗುರುತಿಸಲಾಗಿದೆ. ಸಂಜಯ್​ ವರ್ಮಾ ಮತ್ತು ಲವಕುಶ್​ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೇ ಡಿ.06ರಂದು ವಿಕ್ರಮ್​​, ಆರೋಪಿ ಸಂಜಯ್​ ವರ್ಮಾಗೆ ಸಹಾಯಕನಾಗಿ ಜಮೀನಲ್ಲಿ ಕೆಲಸ ಮಾಡುತ್ತಿದ್ದಾನೆ. ಕೆಲಸದ ಭರದಲ್ಲಿ ಕೊಯ್ಲು ಯಂತ್ರಕ್ಕೆ ಬಿದ್ದಿದ್ದು, ಗಂಭೀರ ಗಾಯಗಳಾಗಿವೆ. ಇದರಿಂದ ಭಯಭೀತರಾದ ಆರೋಪಿಗಳು ವಿಕ್ರಮ್​ಗೆ ಸಹಾಯ ಮಾಡುವ ಬದಲು ಅದೇ ಯಂತ್ರದಿಂದ 17 ತುಂಡುಗಳಾಗಿ ಕತ್ತರಿಸಿ ಜಮೀನಿನ ತುಂಬಾ ಬೇರೆ ಬೇರೆ ಕಡೆ ಹೂಳಿದ್ದಾರೆ. ಬಳಿಕ ಈ ವಿಯಷ ಯಾರಿಗೂ ತಿಳಿಯಬಾರದು ಎಂಬ ಕಾರಣಕ್ಕೆ ವಿಕ್ರಮ್​ ಬಟ್ಟೆ ಮತ್ತು ಅವನ ವಸ್ತುಗಳನ್ನ ದೂರಲ್ಲಿನ ಗುಂಡಿಯೊಂದರಲ್ಲಿ ಬಿಸಾಡಿ(ಸಾಕ್ಷ್ಯನಾಶ) ಹೊರಟಿದ್ದಾರೆ ಎಂದು ಎಸ್ಪಿ ವೃಂದಾ ಶುಕ್ಲಾ ತಿಳಿಸಿದ್ದಾರೆ.

ಕಳೆದ 10 ದಿನಗಳಿಂದ ಕಾಣೆಯಾದ ಮಗನನ್ನು ಹುಡುಕಿದ ವಿಕ್ರಮ್​ ಪಾಲಕರು ಕೊನೆಗೆ ಪೊಲೀಸ್​ ಠಾಣೆ ಮೇಟ್ಟಿಲೆರಿ ಡಿ.09ರಂದು ದೂರು ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ವಿಕ್ರಮ್​ನ ಬಟ್ಟೆ ಮತ್ತು ಅವನ ವಸ್ತುಗಳು ಪತ್ತೆ ಹಚ್ಚಿದ್ದಾರೆ. ಬಳಿಕ ಜಮೀನಿಗೆ ಸಂಬಂಧಿಸಿದವರ ಮತ್ತು ಊರಿನ ಜನರ ಮೂಲಕ ಮಾಹಿತಿ ಕಲೆ ಹಾಕಿ ಕೊನೆಗೂ ಇಬ್ಬರ ಆರೋಪಿಗಳನ್ನು ಬಂಧಿಸಿದ್ದಾರೆ.

ವಿಚಾರಣೆ ಸಮಯದಲ್ಲಿ ಇಬ್ಬರು ಆರೋಪಿಗಳು ತಪ್ಪೋಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಇಬ್ಬರ ಮೇಲೆ ಕೊಲೆ ಮತ್ತು ಸಾಕ್ಷ್ಯನಾಶದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎದು ಎಸ್ಪಿ ತಿಳಿಸಿದ್ದಾರೆ.(ಏಜೆನ್ಸೀಸ್​).