ನ್ಯೂಸ್

King Charles -III: ಭಾರತದಲ್ಲಿ ಬ್ರಿಟಿಷ್​ ರಾಜದಂಪತಿ ಸೀಕ್ರೇಟ್​ ಟ್ರಿಪ್​: ಬೆಂಗಳೂರಿಗೆ ಬಂದಿದ್ದು ಇದೇ ಕಾರಣಕ್ಕೆ ನೋಡಿ..

ಬೆಂಗಳೂರು: ಬ್ರಿಟನ್ ರಾಜ ಕಿಂಗ್ ಚಾರ್ಲ್ಸ್-3 (King Charles-III) ಮತ್ತು ಅವರ ಪತ್ನಿ ರಾಣಿ ಕ್ಯಾಮಿಲ್ಲಾ ಭಾರತದಲ್ಲಿ ರಹಸ್ಯ ಪ್ರವಾಸದಲ್ಲಿದ್ದಾರೆ. ಅಕ್ಟೋಬರ್ 27 ರಿಂದ ಇಬ್ಬರೂ ಬೆಂಗಳೂರಿನಲ್ಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:

ಅವರು ಬೆಂಗಳೂರಿನ ಕ್ಷೇಮ ಕೇಂದ್ರದಲ್ಲಿ (ಎಸ್‌ಐಎಚ್‌ಸಿ) ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ರಿಟನ್‌ನ ರಾಜ ದಂಪತಿ ಯೋಗ ಮತ್ತು ಧ್ಯಾನದಲ್ಲಿ ಕ್ಷೇಮ ಕೇಂದ್ರದಲ್ಲಿದ್ದು, ಬೆಂಗಳೂರಿನಿಂದ ಅ.30(ಬುಧವಾರ) ಬ್ರಿಟನ್ ಗೆ ವಾಪಸ್ಸಾಗಲಿದ್ದಾರೆ ಎಂದು ವರದಿಯಾಗಿದೆ.

ಅಕ್ಟೋಬರ್ 21-26 ರ ನಡುವೆ ಕಾಮನ್‌ವೆಲ್ತ್ ಸರ್ಕಾರದ ಮುಖ್ಯಸ್ಥರ ಸಭೆಯಲ್ಲಿ ಭಾಗವಹಿಸಿದ ನಂತರ ಕಿಂಗ್ ಚಾರ್ಲ್ಸ್- III ನೇರವಾಗಿ ಭಾರತಕ್ಕೆ ಬಂದಿದ್ದಾರೆ. ಇದು ರಹಸ್ಯ ಪ್ರವಾಸವಾಗಿರುವುದರಿಂದ ಸರ್ಕಾರ ಯಾವುದೇ ಔಪಚಾರಿಕ ಆಹ್ವಾನ ಆಯೋಜಿಸಿರಲಿಲ್ಲ. ಬೆಂಗಳೂರಿನಲ್ಲಿರುವ ಕ್ಷೇಮ ಕೇಂದ್ರದಲ್ಲಿ ವಿಶೇಷ ಸಿಬ್ಬಂದಿ ಅವರಿಗೆ ವಿವಿಧ ಚಿಕಿತ್ಸೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಕಿಂಗ್ ಚಾರ್ಲ್ಸ್ III ಅಧಿಕೃತವಾಗಿ ಬ್ರಿಟನ್ ರಾಜನಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಭಾರತ ಭೇಟಿಯಾಗಿದೆ. ಆದರೆ ಪ್ರಿನ್ಸ್ ಆಫ್ ವೇಲ್ಸ್ ಆಗಿದ್ದ ಕಾಲದಲ್ಲಿ ಬೆಂಗಳೂರಿನ ವೆಲ್ ನೆಸ್ ಸೆಂಟರ್ ಗೆ ಹಲವು ಬಾರಿ ಭೇಟಿ ನೀಡುತ್ತಿದ್ದರು. ಇಲ್ಲಿ ಅವರು ತಮ್ಮ 71ನೇ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದರು. 2022 ರಲ್ಲಿ ರಾಣಿ ಎಲಿಜಬೆತ್ ಚಾರ್ಲ್ಸ್ ಅವರ ಮರಣದ ನಂತರ ಬ್ರಿಟನ್ ರಾಜ ಎಂದು ಘೋಷಿಸಲಾಯಿತು.

ಸೌಖ್ಯ ಇಂಟರ್‌ನ್ಯಾಶನಲ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್ ಬೆಂಗಳೂರಿನ ಸಮೇತನಹಳ್ಳಿಯಲ್ಲಿದೆ. ಇದನ್ನು ಡಾ. ಇಸಾಕ್ ಮಥಾಯ್ ಡಾ. ಸುಜಾ ಇಸಾಕ್ ಸ್ಥಾಪಿಸಿದ್ದರು. ಇದು ಆಯುರ್ವೇದ, ನ್ಯಾಚುರೋಪತಿ, ಆಕ್ಯುಪ್ರೆಶರ್, ಯೋಗ, ಹೋಮಿಯೋಪತಿ ಮತ್ತು ಇತರ ಸಾಂಪ್ರದಾಯಿಕ ಚಿಕಿತ್ಸೆಗಳನ್ನು ಒಳಗೊಂಡಿದೆ. ಚಾರ್ಲ್ಸ್ III ಈ ಕ್ಷೇಮ ಕೇಂದ್ರಕ್ಕೆ ಒಂಬತ್ತು ಬಾರಿ ಭೇಟಿ ನೀಡಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.