ನ್ಯೂಸ್

ಕರೊನಾ ಸೋಂಕಿತರಾದರೆ ಈ ಅಂಗಕ್ಕೆ ರಿಸ್ಕ್​ ಜಾಸ್ತಿ!

ನ್ಯೂಯಾರ್ಕ್​: ಕರೊನಾ ಸೋಂಕಿತರಲ್ಲಿ ಮಧುಮೇಹಿಗಳಿದ್ದರೆ, ಹೃದ್ರೋಗಿಗಳಿದ್ದರೆ ರಿಸ್ಕ್​ ಜಾಸ್ತಿ ಎಂಬ ವಿಷಯ ಈಗಾಗಲೇ ಬಹಳ ಸುದ್ದಿಯಾಗಿದೆ. ಜತೆಗೆ ಇದೀಗ ಕರೊನಾದಿಂದ ದೇಹದ ಪ್ರಮುಖ ಅಂಗವೊಂದಕ್ಕೆ ಅಪಾಯ ಹೆಚ್ಚು ಎಂಬ ವಿಷಯವೂ ಬಯಲಾಗಿದೆ.

ಅಮೆರಿಕನ್ ಸೊಸೈಟಿ ಆಫ್​ ನೆಫ್ರಾಲಜಿ ಎಂಬ ಜರ್ನಲ್​ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಈ ವಿಷಯ ಉಲ್ಲೇಖಗೊಂಡಿದೆ. ಕೋವಿಡ್​-19 ಸೋಂಕಿತರಲ್ಲಿ ಮೂತ್ರಪಿಂಡದ ವೈಫಲ್ಯ ಸಮಸ್ಯೆ ಸಂಭವಿಸುವ ಸಾಧ್ಯತೆ ಅಧಿಕವಿದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.

ಕರೊನಾ ಸೋಂಕಿತರಲ್ಲಿ ಸೊಲ್ಯೂಬಲ್​ ಯುರೊಕೈನೇಸ್​ ರಿಸೆಪ್ಟರ್ (suPAR) ಎಂಬ ಪ್ರೊಟೀನ್​ ಮಟ್ಟ ಹೆಚ್ಚಾಗುತ್ತದೆ. ಮೂತ್ರಪಿಂಡದ ಸಮಸ್ಯೆ ಇರುವ ಸಾವಿರಾರು ರೋಗಿಗಳಲ್ಲಿ ಈ suPAR ಕಾರಣವಾಗಿದ್ದನ್ನು ಗಮನಿಸಿದ್ದಾಗಿ ಸಂಶೋಧಕರು ಹೇಳಿದ್ದಾರೆ.

ಇದಕ್ಕಾಗಿ 352 ಮಂದಿ ಕರೊನಾ ಸೋಂಕಿತರನ್ನು ಸಂಶೋಧನೆಗೆ ಒಳಪಡಿಸಿದ್ದು, ಅವರಲ್ಲಿ ಕಾಲುಭಾಗದಷ್ಟು ಜನರಲ್ಲಿ ಕಿಡ್ನಿ ಸಮಸ್ಯೆ ಕಂಡುಬಂದಿದ್ದು, ಅವರ suPAR ಮಟ್ಟ ಉಳಿದವರಿಗಿಂತ ಶೇ. 60 ಹೆಚ್ಚಿತ್ತು ಎಂದು ಅಧ್ಯಯನ ಹೇಳಿದೆ. (ಏಜೆನ್ಸೀಸ್​)