ನ್ಯೂಸ್

ಕಿಡ್ನ್ಯಾಪರ್ ನನ್ನ ಬಿಟ್ಟು ಬರಲು ಒಪ್ಪದೆ ಗೋಳಾಡಿದ ಬಾಲಕ; ವಿಡಿಯೋ ನೋಡಿ

ರಾಜಸ್ಥಾನ: ಸಾಮಾನ್ಯವಾಗಿ ಯಾವುದೇ ಮಕ್ಕಳು ತಂದೆ- ತಾಯಿಯಿಂದ ದೂರ ಮಾಡಿದರೆ ಅಳುತ್ತಾರೆ. ಆದರೆ ಇತ್ತೀಚೆಗೆ ವಿಚಿತ್ರ ಘಟನೆಯೊಂದು ನಡೆದಿದೆ. ಎರಡು ವರ್ಷದ ಬಾಲಕ ತನ್ನನ್ನು ಅಪಹರಣ ಮಾಡಿದ ವ್ಯಕ್ತಿಯನ್ನು ಬಿಟ್ಟಿರಲಾರೆ ಎಂದು ಕಣ್ಣೀರು ಹಾಕುತ್ತಿರು ವಿಡಿಯೋ ವೈರಲ್​​ ಆಗಿದೆ.

ಜೈಪುರದಲ್ಲಿ 14 ತಿಂಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಮಗುವನ್ನು ಪೊಲೀಸರು ಪತ್ತೆ ಹಚ್ಚಿದಾಗ ಆತ ಅಪಹರಣಕಾರನನ್ನು ಬಿಡಲು ಸಿದ್ಧನಿರಲಿಲ್ಲ. ಆರೋಪಿಯನ್ನು ಅಪ್ಪಿಕೊಂಡು ಜೋರಾಗಿ ಅಳಲು ತೋಡಿಕೊಂಡರು. ಮಗು ಅಳುತ್ತಿರುವುದನ್ನು ಕಂಡು ಅಪಹರಣಕಾರನ ಕಣ್ಣಲ್ಲೂ ನೀರು ಬಂದಿತ್ತು. ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದೆ.

ನಡೆದಿದ್ದೇನು?: ಉತ್ತರ ಪ್ರದೇಶದ ತನುಜ್ ಚಹರ್ ಅವರು ರಿಸರ್ವ್ ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದರು. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಅವರನ್ನು ಅಮಾನತುಗೊಳಿಸಿದ್ದರು. ಅಮಾನತು ಗೊಂಡು ಬೇಸರದಲ್ಲಿದ್ದ ಈಗ ರಾಜಸ್ಥಾನದ ಪೃಥ್ವಿ ಎಂಬ 8 ತಿಂಗಳ ಮಗುವನ್ನು ಅಪಹರಿಸಿದ್ದ. ಮಗು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಾಲಕನೊಂದಿಗೆ ಬೇರೆ ಬೇರೆ ಕಡೆ ತೆರಳಿದ್ದಾನೆ. ಯಾರೂ ಗುರುತಿಸದಂತೆ ಗಡ್ಡ ಬೆಳೆಸಿ ಗೆಟಪ್ ಚೇಂಜ್ ಮಾಡುತ್ತಿದ್ದ. ಬಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ತನುಜ್ ಚಹರ್ ಬೆದರಿಕೆ ಹಾಕಿದ್ದಾನೆ. ಕೊನೆಗೂ 14 ತಿಂಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಅಲಿಗಢ ಪ್ರದೇಶದಲ್ಲಿ ಪೊಲೀಸರು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ.

ಕಿಡ್ನಾಪರ್ ಮಗು ಪೃಥ್ವಿಗೆ ಹತ್ತಿರವಾಗುತ್ತಿದ್ದಂತೆ ಕಿಡ್ನಾಪರ್ ಬಗ್ಗೆ ಒಲವು ಬೆಳೆಯಿತು. ಅಪಹರಣಕಾರನನ್ನು ಬಿಟ್ಟು ತಂದೆ-ತಾಯಿಯರ ಬಳಿ ಹೋಗುವುದಿಲ್ಲ ಎಂದು ಮಗು ಅಳಲು ತೋಡಿಕೊಂಡಿದೆ. ನೋವಿನಿಂದ ಮಗುವನ್ನು ಒಪ್ಪಿಸಲು ಮುಂದಾದಾಗ ಅಪಹರಣಕಾರನ ಕಣ್ಣಲ್ಲೂ ನೀರು ತುಂಬಿತ್ತು. ಒಂದೆಡೆ ಬಾಲಕ ಅಳುತ್ತಿದ್ದರೂ ಬಲವಂತವಾಗಿ ಅಪಹರಣಕಾರನಿಂದ ಬಿಡುಗಡೆಗೊಳಿಸಿ ಮಗುವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಪೊಲೀಸರು ಬಾಲಕನನ್ನು ಅಪಹರಿಸಿದ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಅಪಹರಣಕಾರ ತನುಜ್ ಬಾಲಕನ ತಾಯಿ ಪೂನಂ ಚೌಧರಿ ಅವರನ್ನು ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದಾನೆ. ಆದರೆ ಆಕೆ ನಿರಾಕರಿಸಿದಾಗ, ಕೋಪದಲ್ಲಿ ಪೂನಂ ಮಗುವನ್ನು ಎತ್ತಿಕೊಂಡು ಹೋಗಿದ್ದನು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.