ನ್ಯೂಸ್

ಶಸ್ತ್ರಸಜ್ಜಿತರಾಗಿ ಬಂದವರು ಅಪಹರಿಸಿ, ಅತ್ಯಾಚಾರವೆಸಗಿ, ಹಣ, ಮೊಬೈಲ್ ಕದ್ದುಹೋದರು...

ಬುರ್ಹಾನ್​​ಪುರ (ಮಧ್ಯಪ್ರದೇಶ): ಆರು ಜನ ಶಸ್ತ್ರಧಾರಿಗಳು ಬಂದು ಮಹಿಳೆ ಮತ್ತು ಆಕೆಯ ಮಗಳನ್ನು ಅಪಹರಿಸಿ, ಅತ್ಯಾಚಾರವೆಸಗಿ, ಮೊಬೈಲ್, ಹಣ ಕದ್ದು ಪರಾರಿಯಾದ ಘಟನೆ ನಡೆದಿದೆ.

ಇದು ನಡೆದ್ದು ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯಲ್ಲಿ. ಮಹಿಳೆ ಮತ್ತು ಮಗಳು ಮನೆಯಲ್ಲಿದ್ದಾಗ ಈ ಘಟನೆ ಭಾನುವಾರ ನಡೆದಿದೆ.

ಶುಕ್ರವಾರ ಮಧ್ಯರಾತ್ರಿ, ಕಲ್ಲು ಪುಡಿಮಾಡುವ ಪ್ರದೇಶದ ಬಳಿ ಇರುವ ಅವರ ಮನೆಯಲ್ಲಿ ಮಹಿಳೆ, ಅವಳ ಗಂಡ ಮತ್ತು ಅವಳ ಮಗಳು ಇದ್ದರು.

ಆರು ಮಂದಿ ಶಸ್ತ್ರಸಜ್ಜಿತರಾಗಿ ಆ ಮನೆಗೆ ಬಂದು ಆಕೆಯ ಗಂಡನನ್ನು ಒತ್ತೆಯಾಳಾಗಿ ಇರಿಸಿ, ಮಹಿಳೆ ಮತ್ತು ಆಕೆಯ 12 ವರ್ಷದ ಮಗಳನ್ನು ಅಪಹರಿಸಿ ಸಮೀಪದ ಹೊಲಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರವೆಸಗಿದ್ದಾರೆ.

ಅಷ್ಟೇ ಅಲ್ಲದೆ ಆರೋಪಿಗಳು ಅವರ ಮನೆಯಿಂದ ಹಣ, ಮೊಬೈಲ್ ಫೋನ್‌ ಕದ್ದಿದ್ದಾರೆ.

ಘಟನೆಯ ಕುರಿತು ತಿಳಿದ ನಂತರ ಪೊಲೀಸರು ಆರೋಪಿಗಳ ಶೋಧಕಾರ್ಯಕ್ಕೆ ಬುಲ್ಖಾನಾ ಮತ್ತು ಜಲ್ಗಾಂವ್‌ಗೆ ತಂಡಗಳನ್ನು ಕಳುಹಿಸಿದ್ದಾರೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಶಹಪುರ ಪೊಲೀಸ್ ಠಾಣೆ ಉಸ್ತುವಾರಿ ಸಂಜಯ್ ಪಾಠಕ್ ತಿಳಿಸಿದ್ದಾರೆ.