ನ್ಯೂಸ್

ಪಿಸ್ತೂಲ್ ತೋರಿಸಿ ಕಾರು ಸುಲಿಗೆ ಆರೋಪಿ ಬಂಧನ

ಮಂಗಳೂರು: ಕಿಡ್ನಾಪ್ ಮಾಡಿ ಆಟಿಕೆ ಪಿಸ್ತೂಲ್ ತೋರಿಸಿ ಕಾರು ಮತ್ತು ಮೊಬೈಲ್ ದೋಚಿದ್ದ ಆರೋಪಿ ಬಜಾಲ್ ನಂತೂರಿನ ನೌಫಾಲ್ ಯಾನೆ ಟೊಪ್ಪಿ ನೌಫಾಲ್ (31) ಎಂಬಾತನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.


ಪರಿಚಯದ ಮಜೀದ್ ಸೈಯದ್ ಅವರನ್ನು ನೌಫಾಲ್ ಮತ್ತು ಪುಚ್ಚ ಎಂಬವರು ಕಿಡ್ನಾಪ್ ಮಾಡಿ 5 ಲಕ್ಷ ರೂ. ಹಾಗೂ ಕಾರು ನೀಡುವಂತೆ ಬೇಡಿಕೆ ಇಟ್ಟಿದ್ದರು. ಅವರು ಕೊಡಲು ನಿರಾಕರಿಸಿದಾಗ ಅವರ ಬಳಿಯಿಂದ ಕಾರು, ಮೊಬೈಲ್ ಹಾಗೂ 18 ಸಾವಿರ ರೂ, ಮಗಳ ಮೊಬೈಲ್ ಸುಲಿಗೆ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಗ್ರಾಮಾಂತರ ಪೊಲೀಸ್ ಠಾಣಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನೌಫಾಲ್‌ನನ್ನು ಪಾಂಡೇಶ್ವರ ಇನ್‌ಸ್ಪೆಕ್ಟರ್ ಎ.ಸಿ.ಲೋಕೇಶ್ ಅವರು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿದಾಗ ಕೃತ್ಯ ಒಪ್ಪಿಕೊಂಡಿದ್ದಾನೆ. ಇನ್ನೋರ್ವ ಆರೋಪಿ ಪುಚ್ಚ ತಲೆಮರೆಸಿಕೊಂಡಿದ್ದಾನೆ.