ನ್ಯೂಸ್

'ಕೆಡಿ' ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ 'ಕಿಚ್ಚ ಸುದೀಪ್‌' ಅಬ್ಬರ| KD Movie

KD Movie ; ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದಿಂದ ಬಿಗ್​ ಅಪ್​ಡೇಟ್​ವೊಂದು ಹೊರಬಿದ್ದಿದೆ. ಕೆಡಿ ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್ ಕೂಡ ಇದ್ದಾರಾ ಎಂಬ ಅಭಿಮಾನಿಗಳ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಹೈದರಾಬಾದ್​ನಲ್ಲಿಯೇ ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಅಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ.

(ಏಜೆನ್ಸೀಸ್)

ಹೀಗಾಗಿ ಕೆಡಿ ಸಿನಿಮಾದಲ್ಲಿ ಕಿಚ್ಚ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಧಿಕೃತವಾಗಿದೆ. ಇಲ್ಲಿವರೆಗೆ ಈ ಸುದ್ದಿ ವದಂತಿಯಾಗಿತ್ತು. ಆದರೆ ಇದೀಗ ನಿರ್ದೇಶಕ ಜೋಗಿ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಶೂಟಿಂಗ್‌ ಸೆಟ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಧ್ರುವ ಸರ್ಜಾ, ಕಿಚ್ಚ ಸುದೀಪ್‌ ಹಾಗೂ ಪ್ರೇಮ್‌ ಜೊತೆಗಿರುವ ಫೋಟೋಗಳು ಇದೀಗ ವೈರಲ್‌ ಆಗಿವೆ.

ಜೋಗಿ ಪ್ರೇಮ್ ನಿರ್ದೇಶನ ಮಾಡಿರೋ ಕೆಡಿ ಸಿನಿಮಾದಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್ ಹಾಗೂ ರವಿಚಂದ್ರನ್ ಬಣ್ಣ ಹಚ್ಚಿದ್ದಾರೆ. ಇನ್ನೂ ಇಂತಹ ಮಹಾನ್​ ನಟರ ಜೊತೆ ಬಾದ್​ಷಾ ಕಿಚ್ಚ ಸುದೀಪ್​ ಕೂಡ ಇರಲಿದ್ದಾರೆ ಎಂಬ ವಿಚಾರವನ್ನು ಸ್ವತಃ ಜೋಗಿ ಪ್ರೇಮ್ ಅವರೇ ಹಂಚಿಕೊಂಡಿದ್ದಾರೆ.