ನ್ಯೂಸ್

ನನ್ನ ದರ್ಶನ್​ ​ನಡುವೆ ಏನೂ ಇಲ್ಲ..ನಾನು ಬಾಸ್ ಅನ್ನೋದು ನನ್ನ ತಂದೆಗೆ: ಕಿಚ್ಚ ಸುದೀಪ್..Sudeep Talk About Darshan

ನಾನು ಬಾಸ್ ಎಂದು ಕರೆಯುವುದು ನನ್ನ ತಂದೆಗೆ

ನನ್ನ ಅಭಿಮಾನಿಗಳು ಹೋಗಿ ದರ್ಶನ್ ಸಿನಿಮಾ ನೋಡುತ್ತಾರೆ. ಅವರ ಅಭಿಮಾನಿಗಳು ಬಂದು ನನ್ನ ಸಿನಿಮಾ ನೋಡುತ್ತಾರೆ.

ಬೆಂಗಳೂರು: ( Sudeep Talk About Darshan ) ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸನ್ನು  ಕಾಣುತ್ತಿದೆ. ಈ ಸಿನಿಮಾವನ್ನು ಸಂಭ್ರಮಿಸುವ ವೇಳೆ ಬಾಸಿಸಂ ಕಾಲ ಮುಗೀತು, ಮ್ಯಾಕ್ಸಿಮಮ್‌ ಮಾಸ್‌ ಕಾಲ ಶುರುವಾಯಿತೆಂದು ಬರೆಸಿದ್ದ ಕೇಕ್ ಅನ್ನು ಕಿಚ್ಚ ಸುದೀಪ್ ಕಟ್ ಮಾಡಿದ್ದರು. ಆದರೆ ಇದು ದರ್ಶನ್​ಗೆ ಟಾಂಗ್ ಕೊಟ್ಟಿದ್ದಾರೆ ಎಂದು ಸುದ್ದಿ ಮಾಡಲಾಗಿತ್ತು.  ಈ ಕುರಿತಾಗಿ ಸುದೀಪ್​​ ಅವರು  ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ  ಸುದೀಪ್ ಅವರು, ಅವರವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಬಾಸ್ ಅಂತ ಕರೆಯುತ್ತಾರೆ. ನಾನು ಕೇಕ್ ಕಟ್ ಮಾಡಿರುವುದನ್ನು ಯಾರಿಗೋ ಟಾಂಗ್ ಕೊಟ್ಟರು ಎಂದು ಹೇಳುವುದು ಎಷ್ಟು ಸರಿ?. ಕನ್ನಡ ಚಿತ್ರರಂಗ ತುಂಬಾ ನೋವಿನಲ್ಲಿದೆ. ಎಲ್ಲರೂ ಸೇರಿದರೆ ಒಂದು ಚಿತ್ರರಂಗ ಆಗುತ್ತೆ. ಅದು ಬೆಳೆಯಬೇಕು ಎಂದರೆ ಇದನ್ನೆಲ್ಲಾ ಬಿಟ್ಟು ಬಿಡಬೇಕು. ನನಗೂ ದರ್ಶನ್​ ನಡುವೆ ಏನೂ ಇಲ್ಲ. ಅವರು ಬಹಳ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ನಾನು ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ನಾನು ಬಾಸ್ ಎಂದು ಕರೆಯುವುದು ನನ್ನ ತಂದೆಗೆ. ನಾವು, ನೀವು ಪ್ರೀತಿಯಿಂದ ಮಾತನಾಡಿಕೊಳ್ಳಬೇಕು ಆಗುತ್ತೆ. ಯಾರಲ್ಲೂ ಬೇಧ-ಭಾವ ಬೇಡ. ಕನ್ನಡ ಚಿತ್ರರಂಗ ಮುಖ್ಯನಾ, ನಾನಾ ನೀನಾ ಎನ್ನುವುದು ಮುಖ್ಯನಾ?. ಆದರೆ ಇದರಲ್ಲಿ ಯಾವುದು ಮುಖ್ಯವಲ್ಲ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

ನನ್ನ ಅಭಿಮಾನಿಗಳು ಹೋಗಿ ದರ್ಶನ್ ಸಿನಿಮಾ ನೋಡುತ್ತಾರೆ. ಅವರ ಅಭಿಮಾನಿಗಳು ಬಂದು ನನ್ನ ಸಿನಿಮಾ ನೋಡುತ್ತಾರೆ. ಹಿರಿಯರು ಸಿನಿಮಾ ರಂಗವನ್ನು ಬೆಳೆಸಿ ನಮ್ಮ ಕೈಯಲ್ಲಿ ಕೊಟ್ಟು ಹೋಗಿದ್ದಾರೆ. ನಾವು ಇನ್ನಷ್ಟು ಬೆಳೆಸಿ ಅದನ್ನು ಮುಂದಿನ ಜನರೇಷನ್​​ಗೆ ಕೊಡಬೇಕು. ಚಿತ್ರರಂಗದಲ್ಲಿ ಇದೊಂದು ಸಂಪ್ರದಾಯ, ಒಂದು ಕುಟುಂಬ ಎಂದು ಹೇಳಿದರು.

ದರ್ಶನ್ ಫ್ಯಾನ್​ ಬಗ್ಗೆ ಈ ಮೊದಲೇ ಹೇಳಿದ್ದೆ. ಅವರಿಗೆ ಏನ್ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಅವರೆಲ್ಲಾ ನೋವಲ್ಲಿದ್ದಾರೆ. ಕೆಟ್ಟ ಅಹಂಕಾರ ನಮ್ಮಲ್ಲಿದೆ ಎಂದು ಅಂದುಕೊಂಡಿರುವುದೇ ತಪ್ಪು ಅಲ್ವಾ? ಎಂದಿದ್ದಾರೆ.