ನ್ಯೂಸ್

ನಟಿ ಕಿಯಾರಾ ಅಡ್ವಾಣಿ ಆಸ್ಪತ್ರೆಗೆ ದಾಖಲು! Kiara Advani ಪ್ರೆಗ್ನೆಂಟ್ ಎಂದ್ರು ಫ್ಯಾನ್ಸ್​​

ಮುಂಬೈ: ಬಾಲಿವುಡ್​ ನಟಿ ಕಿಯಾರಾ ಅಡ್ವಾನಿ ( Kiara Advani ) ಗೇಮ್ ಚೇಂಜರ್ ಚಿತ್ರದ ಟ್ರೇಲರ್ ಬಿಡುಗಡೆಗೆ ಹಾಜರಾಗಿರಲಿಲ್ಲ.  ಅನಾರೋಗ್ಯ ಕಾರಣದಿಂದಾಗಿ ನಟಿ  ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ನಟಿ ಕಿಯಾರಾ ಅಡ್ವಾಣಿ ಪಾನ್  ಮುಂಬರುವ ಚಿತ್ರ ಗೇಮ್ ಚೇಂಜರ್. ಚಿತ್ರದಲ್ಲಿ ನಟ ರಾಮ್ ಚರಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ನಟಿ ಕಿಯಾರಾ ಅಡ್ವಾಣಿ ಅವರ ಜೊತೆ ನಟಿಸುತ್ತಿದ್ದಾರೆ. ನಿರ್ದೇಶಕ ಎಸ್. ಶಂಕರ್ ಅವರ ಭವ್ಯ ನಿರ್ದೇಶನದ ಈ ಚಿತ್ರದ ಮೂಲಕ ಅವರು ತೆಲುಗು ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಸದ್ಯ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಪ್ರಚಾರ ಕಾರ್ಯ ನಡೆಯುತ್ತಿದೆ.

ನಟಿ ಕಿಯಾರಾ ಅಡ್ವಾಣಿ ಅವರು ಗೇಮ್ ಚೇಂಜರ್ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿಲ್ಲ, ಪ್ರಮೋಷನ್ ಕಾರ್ಯಕ್ರಮದಲ್ಲಿ ನಟಿ ಕಿಯಾರಾ ಅಡ್ವಾಣಿ ಅವರಿಗೆ ಹುಷಾರಿಲ್ಲ, ಆದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.  ಈ ಮಾಹಿತಿಯು ಅವರ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನು ಉಂಟುಮಾಡಿದೆ.

ಈ ಬಗ್ಗೆ ಕಿಯಾರಾ ಅಡ್ವಾಣಿ ಕುಟುಂಬ ಮಾತನಾಡಿ,  ಕಿಯಾರಾ ಅಡ್ವಾಣಿ ಅವರು ವಿಶ್ರಾಂತಿಯಿಲ್ಲದೆ ಶೂಟಿಂಗ್​ನಲ್ಲಿ ಭಾಗವಹಿಸಿದ್ದರಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕೆಲವು ದಿನಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ.  ಹೀಗಾಗಿ ಅವರು ಸಿನಿಮಾ  ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು  ಸ್ಪಷ್ಟನೆ ನೀಡಿದ್ದಾರೆ. 

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು   2023 ಫೆಬ್ರವರಿ 7 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಇಬ್ಬರು ಸಿನಿಮಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ನಟಿ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವುದನ್ನು ಗಮನಿಸಿದ ನೆಟ್ಟಿಗರು ಕಿಯಾರ ಗರ್ಭಿಣಿ ಎಂದು ಹೇಳುತ್ತಿದ್ದಾರೆ. ಆದರೆ ಈ ಕುರಿತಾಗಿ  ಯಾವುದೇ ಸ್ಪಷ್ಟನೆ ಇಲ್ಲ.