ನ್ಯೂಸ್

ತಾಕತ್ತಿದ್ರೆ ನಮ್ಮಲ್ಲಿಗೆ ಬರಲಿ; ನಟಿ ಕಂಗನಾಗೆ ಚಾಲೆಂಜ್​, ಅವರ ಸಿನಿಮಾಗಳಿಗೆ ಬಹಿಷ್ಕಾರ

ಹರಿಯಾಣ: ಟ್ವೀಟ್​ ಮಾಡುವ ಮೂಲಕವೇ ಆಗಾಗ ವಿವಾದಕ್ಕೆ ಒಳಗಾಗುವ ಜತೆಗೆ ಒಂದಾದ ಮೇಲೊಂದರಂತೆ ದಾಖಲಾದ ಕೇಸ್​ಗಳಿಂದ ಸಂಕಷ್ಟಕ್ಕೀಡಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್​ ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಟ್ವೀಟ್​ ಒಂದರ ಹಿನ್ನೆಲೆಯಲ್ಲಿ ಅವರಿಗೆ ಲೀಗಲ್ ನೋಟಿಸೊಂದು ಜಾರಿಯಾಗುವ ಜತೆಗೆ ಅವರ ಸಿನಿಮಾಗಳಿಗೆ ಬಹಿಷ್ಕಾರವೂ ಎದುರಾಗಿದೆ. ಹರಿಯಾಣದ ಖಾಪ್​ ಪಂಚಾಯತ್ ಹರಿಯಾಣಗೆ ಪ್ರವೇಶಿಸಲು ಕಂಗನಾಗೆ ಬಿಡುವುದಿಲ್ಲ ಎಂದಿರುವ ಜತೆಗೆ, ತಾಕತ್ತಿದ್ದರೆ ಕಂಗನಾ ಹರಿಯಾಣಗೆ ಬರಲಿ ಎಂಬುದಾಗಿಯೂ ಸವಾಲೆಸೆದಿದೆ. ಅಲ್ಲದೆ, ಹರಿಯಾಣದಲ್ಲಿ ಅವರ ಎಲ್ಲ ಸಿನಿಮಾಗಳನ್ನೂ ಬಹಿಷ್ಕರಿಸುವುದಾಗಿ ಹೇಳಿದೆ.

ಕೇಂದ್ರ ಸರ್ಕಾರದ ಮೂರು ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಕಂಗನಾ ರಣಾವತ್ ಅವಹೇಳನಕಾರಿಯಾಗಿ ಟ್ವೀಟ್ ಮಾಡಿರುವ ಕುರಿತು ದೆಹಲಿ ಸಿಖ್​ ಗುರುದ್ವಾರ ಮ್ಯಾನೇಜ್​ಮೆಂಟ್ ಕಮಿಟಿಯು ಕಂಗನಾಗೆ ಲೀಗಲ್ ನೋಟಿಸ್ ಕಳುಹಿಸಿದೆ. ಮಾತ್ರವಲ್ಲ ಅವಹೇಳನಕಾರಿ ಟ್ವೀಟ್​ ಸಂಬಂಧ ಬೇಷರತ್ ಕ್ಷಮೆ ಯಾಚಿಸುವಂತೆಯೂ ಆಗ್ರಹಿಸಿದೆ. (ಏಜೆನ್ಸೀಸ್​)